ಜಿಲ್ಲೆ

ವಿರೂಪಾಕ್ಷೇಶ್ವರನಿಗೆ ಶೃಂಗೇರಿ ಶ್ರೀಗಳಿಂದ ಪೂಜೆ

ಮಂಜುನಾಥ

ಹೊಸಪೇಟೆ: ಶೃಂಗೇರಿ ಶಾರಧ ಮಠದ ಪೀಠಾಧೀಶರಾದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ಗುರುವಾರ ಸಲ್ಲಿಸಿದರು.

ಬುಧವಾರ ರಾತ್ರಿ ನಗರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿದ ಶ್ರೀಗಳು, ಗುರುವಾರ ಬೆಳಗ್ಗೆ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಗಂಗಾ ಪೂಜೆ ಮಾಡಿ, ಬಾಗಿನ ಅರ್ಪಣೆ ಮಾಡಿದರು. ನಂತರ ಹಂಪಿಯ ವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿದ ಶ್ರೀಗಳಿಗೆ ಪೂರ್ಣಕುಂಬದೊAದಿಗೆ ಸ್ವಾಗತ ನೀಡಲಾಯಿತು. ವಿದ್ಯಾರಣ್ಯ ಮಠದಲ್ಲಿ ಸ್ನಾನದ ನಂತರ, ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ರುದ್ರಾಭಿಶೇಕ ಹಾಗೂ ಪೂಜೆ ಸಲ್ಲಿಸಿದರು. ನಂತರ ಪಂಪಾ ದೇವಿ, ತಾಯಿ ಭುವನೇಶ್ವರಿ, ಗುಲಗಂಜಿ ಮಾಧವ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಹಂಪಿಯ ಸ್ಥಳೀಯರಿಂದ ಶ್ರೀಗಳ ಪಾದಪೂಜೆ ನಡೆಯಿತು. ಕೋದಂಡರಾಮ ದರ್ಶನ ಪಡೆದುಕೊಂಡು, ಯಂತ್ರೋದ್ಧಾರಕ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಚಕ್ರತೀರ್ಥದ ತುಂಗಭದ್ರಾ ನದಿಯಲ್ಲಿ ದೋಣಿ ವಿಹಾರ ಮಾಡಿದರು. ನಂತರ ಬಡವಿಲಿಂಗ ದರ್ಶನ ಪಡೆದರು. ಉಗ್ರನರಸಿಂಹ, ವಿಜಯವಿಠಲದಲ್ಲಿ ಕಲ್ಲಿರಥ, ಸಂಗೀತಮAಟಪವನ್ನು ವೀಕ್ಷಣೆ ಮಾಡಿದರು.

ಪ್ರಮುಖರಾದ ಮೋಹನ ಚಿಕ್ಕಭಟ್ ಜೋಷಿ, ಸಂತೋAಷ ಇತರರಿದ್ದರು.