ಜಿಲ್ಲೆ

ಹಂಪಿಗೆ ಗಾಯಕಿ ಮಂಗ್ಲಿ

ಮಂಜುನಾಥ

ಹೊಸಪೇಟೆ: ಮಹಾಶಿವರಾತ್ರಿ ನಿಮಿತ್ತ ಆಲ್ಬಮ್ ಪೋಟೋ ಶೂಟ್‌ಗಾಗಿ ಬಹುಭಾಷಾ ಗಾಯಕಿ ಸತ್ಯವತಿ ಮಂಗ್ಲಿ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದರು.

ಶುಕ್ರವಾರ ರಾತ್ರಿ ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇಗುಲಕ್ಕೆ ಬೇಟಿ ನೀಡಿ ದರ್ಶನ ಪಡೆದಿದ್ದಾರೆ. ಶನಿವಾರ ಸಂಜೆ ವಿಜಯ ವಿಠಲ ದೇಗುಲ ಹಾಗೂ ಕಮಲ ಮಹಲ್ ಸೇರಿದಂತೆ ವಿವಿಧ ಸ್ಮಾರಕಕ್ಕೆ ಭೇಟಿ ನೀಡಿ ಪೋಟೋ ಶೂಟ್ ಮಾಡಿಕೊಂಡಿದ್ದಾರೆ. ಆನೆಗೊಂದಿಯ ಅಂಜನಾದ್ರಿ ಬೆಟ್ಟಕ್ಕೂ ತೆರಳಿ ಆಂಜನೇಯನ ದರ್ಶನ ಪಡೆದರು. ನಂತರ ವಿಜಯಪುರಕ್ಕೆ ತೆರಳಿದರು. ಸ್ಥಳೀಯರು ಸೇರಿದಂತೆ ಪ್ರವಾಸಿಗರು ಬಹುಭಾಷಾ ಗಾಯಕಿ ಸತ್ಯವತಿ ಮಂಗ್ಲಿ ಜತೆ ಫೋಟೋ ತೆಗೆಸಿಕೊಂಡರು.