ಜಿಲ್ಲೆ

ಸ್ವದೇಶಿ ದರ್ಶನ್ 2.0 ಗೆ ಹಂಪಿ ಆಯ್ಕೆ

Vijayanagara - Veerendra

ಹಂಪಿ ಬೈ ನೈಟ್, ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಯೋಜನೆ ರೂಪಿಸಿ: ದಿವಾಕರ

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರಮುಖ ಆಕರ್ಷಣೀಯವಾದ `ಹಂಪಿ ಬೈ ನೈಟ್' ಶಾಶ್ವತವಾಗಿ ವ್ಯವಸ್ಥೆಯಾಗುವ ಜತೆಗೆ ಸ್ಥಳೀಯರು ಮತ್ತು ಪ್ರವಾಸಿಗರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಬೇಕು ಎಂದು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಹೇಳಿದರು.

ವಿಶ್ವವಿಖ್ಯಾತ ವಿಶ್ವ ಪಾರಂಪರಿಕ ತಾಣವಾದ ಹಂಪಿಯು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ 2.0 ಯೋಜನೆಗೆ ಆಯ್ಕೆಯಾಗಿದ್ದು, ಯೋಜನೆ ಅನುಷ್ಠಾನ ಕ್ಕೆ ಸಂಬAಧಿಸಿದAತೆ ರಚಿಸಲಾಗಿರುವ ಡೆಸ್ಟಿನೇಷನ್ ನಿರ್ವಹಣಾ ಸಮಿತಿಯ ಕುರಿತು ಬುಧವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಂಪಿಯನ್ನು ಬಿಸಿಲಿನ ನಡುವೆ, ಸೂರ್ಯಾಸ್ತ ಸಮಯದಲ್ಲಿ ನೋಡುವಂತೆ ರಾತ್ರಿ ಸಮಯದಲ್ಲೂ ಹಂಪಿಯು ವಿಭಿನ್ನ ರೋಚಕ ಅನುಭವ ನೀಡುತ್ತದೆ. ಅದಕ್ಕಾಗಿ ಹಂಪಿ ಬೈ ನೈಟ್ ವ್ಯವಸ್ಥೆಗೆ ಅನುಗುಣವಾಗಿ ಯೋಜನೆಯನ್ನು ರೂಪಿಸಬೇಕೆಂದು ಯೋಜನೆಗೆ ಆಯ್ಕೆಗೊಂಡಿರುವ ಖಾಸಗಿ ನಿರ್ವಹಣಾ ಸಂಸ್ಥೆಗೆ ಸೂಚಿಸಿದರು

ಅದೇ ರೀತಿಯಾಗಿ ಸ್ಥಳಿಯರು ಹಾಗೂ ಪ್ರವಾಸಿಗರು ಐತಿಹಾಸಿಕ ಹಂಪಿಯನ್ನು ಯಾವ ರೀತಿ ನೋಡಬಯಸುತ್ತಾರೆ ಅದಕ್ಕೆ ಅನುಗುಣವಾಗಿ ಯೋಜನೆ ಯನ್ನು ಕಾರ್ಯಗತಗೊಳಿಸಬೇಕೆಂದು ಸೂಚಿಸಿದರು. ಸ್ಥಳೀಯರು, ಪ್ರವಾಸಿಗರು ಗರ್ವ ಪಡುವ ರೀತಿಯಲ್ಲಿ ಹಂಪಿಯನ್ನು ಉನ್ನತೀಕರಣಗೊಳಿಸಬೇಕೆಂ ದು ಸೂಚಿಸಿದರು.

ಸಭೆಯಲ್ಲಿ ಸ್ವದೇಶಿ ದರ್ಶನ್ 2.0 ಯೋಜನೆಗೆ ಆಯ್ಕೆಯಾಗಿರುವ ಡಿಟಿಟಿಐಎಲ್ ಜೆವಿ ಐಬಿಐ ಗ್ರೂಪ್ ಇಂಡಿಯಾ ಪ್ರೆöÊ.ಲಿಮಿಟೆಡ್ ಪ್ರತಿನಿಧಿಗಳು ಯೋಜನೆಗೆ ಸಂಬAಧಿಸಿದAತೆ ನೀಡಿದ ವರದಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು ಯುನಿಸ್ಕೋ, ಎಎಸ್‌ಐ ಹಾಗೂ ಹವಾಮಾ ಸಂಪೂರ್ಣವಾದ ಬೆಂಬಲ ನೀಡುತ್ತದೆ. ಮಾರ್ಗಸೂಚಿ ಅನುಗುಣವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಸೂಚಿಸದರು.
ಹವಾಮಾ ಆಯುಕ್ತ ನೋಗ್ಡಾಯ್ ಮೊಹಮ್ಮದ್ ಅಲಿ ಆಕ್ರಂ ಶಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಇದ್ದರು.