ಜಿಲ್ಲೆ

ಶ್ರೀಪುರಂದರ ದಾಸರ ಮಧ್ಯಾರಾಧನೆ ಸಂಪನ್ನ

ಹೊಸಪೇಟೆ: ದಾಸ ಸಾಹಿತ್ಯ ಮಾತ್ರವಲ್ಲದೆ ಕನ್ನಡ ಸಾಹಿತ್ಯ ಲೋಕಕ್ಕೆ ಪುರಂದರ ದಾಸರ ಕೊಡುಗೆ ಅನನ್ಯ ಎಂದು ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ವಿದ್ವಾನ್ ಸುಳಾದಿ ಹನುಮೇಶ್ ಆಚಾರ್ಯ ತಿಳಿಸಿದರು.

ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಶ್ರೀಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್, ಜಿಲ್ಕಾಡಳಿತ, ಕನ್ನಡ‌ ಮತ್ತು ಸಂಸ್ಕೃತಿ ಇಲಾಖೆಯಿಂದ ಹಂಪಿಯ ಶ್ರೀಪುರಂದರ ದಾಸರ ಮಂಟಪದಲ್ಲಿ ಬುಧವಾರ ಶ್ರೀಪುರಂದರ ದಾಸರ ಮಧ್ಯಾರಾಧನೆ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದೇರ್ಶಕ ಸಿದ್ಧಣ್ಣಬರಂಗಣ್ಣನವರ್ ಮಾತನಾಡಿ, ದಾಸರ ಆರಾಧನೆ ಶ್ರದ್ಧೆ ಭಕ್ತಿಯಿಂದ ನಡೆಸಲಾಗುತ್ತಿದೆ. ಸಾಮಾಜಕ್ಕೆ ಪುರಂದರ ದಾಸರ ತತ್ವ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದಾಸರ ಸಂದೇಶ ವಿಚಾರಗಳು ಸರ್ವಕಾಲಿಕವಾಗಿದೆ ಎಂದರು.

ಮಧ್ಯಾರಾಧನೆ ಪ್ರಯುಕ್ತ ಶ್ರೀಪುರಂದರ ದಾಸರ ಮಂಟಪದಲ್ಲಿ ದಾಸರರಾಯರ ಕಂಬಕ್ಕೆ ಬೆಳಿಗ್ಗೆ ವಿಶೇಷವಾಗಿ ಫಲ ಪಂಚಾಮೃತಾಭಷೇಕ, ಅರ್ಚನೆ, ವಿವಿಧ ಹೂವುಗಳಿಂದ ಹಾಗೂ ವಸ್ತ್ರ ಅಲಂಕಾರ ನೆರವೇರಿಸಲಾಯಿತು. ಅಷ್ಟೋತ್ತರ, ಹರಿ ವಾಯುಸ್ತುತಿ ಪಾರಾಯಣ, ಭಜನಾ ಮಹಿಳೆಯರಿಂದ ಭಜನೆ, ಕೀರ್ತನೆ, ಕೋಲಾಟ ನೃತ್ಯ ಪ್ರದರ್ಶನ ನಡೆಯಿತು.

ದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು ವಿಭಾಗೀಯ ವ್ಯವಸ್ಥಾಪಕ ಗುರುರಾಜ್ ದಿಗ್ಗಾವಿ, ರಾಜವಂಶಸ್ಥ ಶ್ರೀಕೃಷ್ಣದೇವರಾಯ, ಮಠಾಧಿಕಾರಿ ಪವನ್ ಆಚಾರ್ಯ, ಅರ್ಚಕ ನರಸಿಂಹ ಆಚಾರ್ಯ, ಪ್ರಮುಖರಾದ ಶೀರೆಕೊಳ ಗುರುರಾಜ್, ಸಿಂಧನೂರು ದೇಸಾಯಿ, ಗುರುರಾಜ್ ಕುಲಕರ್ಣಿ, ಮಾರುತಿ ಆಚಾರ್ಯ, ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಅನಂತ ಪದ್ಮನಾಭ ಇತರರಿದ್ದರು.