ಜಿಲ್ಲೆ

ಹಂಪಿ ಜೋಡಿ ರಥೋತ್ಸವ ಜಿಲ್ಲಾಧಿಕಾರಿ ಪರಿಶೀಲನೆ

ಮಂಜುನಾಥ

ಹೊಸಪೇಟೆ: ದಕ್ಷಿಣಕಾಶಿ ಹಂಪಿಯಲ್ಲಿ ಏ.12ರಿಂದ ಮೂರು ದಿನಗಳ ಕಾಲ ನಡೆಯುವ ವಿರೂಪಾಕ್ಷೇಶ್ವರ ಹಾಗೂ ಶ್ರೀ ಚಂದ್ರಮೌಳೇಶ್ವರ ಜೋಡಿ ರಥೋತ್ಸವ ಹಾಗೂ ಕೋದಂಡರಾಮ ರಥೋತ್ಸವ ಹಿನ್ನೆಲೆಯಲ್ಲಿ ಪೂರ್ವಸಿದ್ದತೆಗಳನ್ನುಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಪರಿಶೀಲಿಸಿದರು.

ಐತಿಹಾಸಿಕ ಪರಂಪರೆಯುಳ್ಳ ಹಂಪಿ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾಧಿಗಳು ಆಗಮಿಸಲಿದ್ದು, ಜನರ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕಿದೆ. ಕ್ಷೇತ್ರದಲ್ಲಿ ಕುಡಿವ ನೀರು, ಸ್ವಚ್ಚತೆ, ರಸ್ತೆ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳ ಒದಗಿಸಬೇಕಿದೆ. ರಥೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ತೊಂದರೆಯಾಗದAತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ನಂತರ ನಗರದ ಹೊರವಲಯದ ಪುರಾತನ ದೇಗುಲ ಶ್ರೀ ಜಂಭುನಾಥೇಶ್ವರ ರಥೋತ್ಸವದ ಹಿನ್ನೆಲ್ಲೆ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.