ಹಂಪಿಯ ಸ್ನಾನ ಘಟ್ಟದ ಪುರಾತನ ಮಂಟಪ ಅರ್ದ ಮುಳುಗಿರುವುದು 
ಜಿಲ್ಲೆ

ಹಂಪಿಯ ಕೆಲ ಸ್ಮಾರಕಗಳು ಜಲಾವೃತ

ಮಂಜುನಾಥ

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳದಿಂದ 3 ಕ್ರಸ್ಟ್ ಗೇಟ್ ಗಳ ಮೂಲಕ 50 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಬಿಟ್ಟಿರೋದರಿಂದ ಐತಿಹಾಸಿಕ ಪ್ರಸಿದ್ಧ ಹಂಪಿಯ ಕೆಲ ಸ್ಮಾರಕಗಳು ಜಲಾವೃತಗೊಂಡಿವೆ.

ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ನದಿಗಳಿಗೆ ಹರಿಬಿಟ್ಟ ಪರಿಣಾಮ ಪುರಂದರದಾಸರ ಮಂಟಪ ಸಂಪೂರ್ಣ ಮುಳಗಡೆಯಾಗಿದೆ. ವಿರುಪಾಕ್ಷೇಶ್ವರ ದೇವಾಲಯದ ಇಂಭಾಗದಲ್ಲಿನ ಕರ್ಮಮಂಟಪ ಹಾಗೂ ಸ್ನಾನಗಟ್ಟ ಮುಳುಗಡೆ ಆಗಿವೆ. ಚಕ್ರತೀರ್ಥ ಕೋದಂಡರಾಮ ದೇಗುಲಕ್ಕೆ ಹೋಗುವ ಕಾಲು ದಾರಿಗೆ ನೀರು ನುಗ್ಗಿವೆ. ತುಂಗಭದ್ರಾ ನದಿದಂಡೆಗೆ ಹೊಂದಿಕೊಂಡಿರುವ ಹಂಪಿ, ಬುಕ್ಕ ಸಾಗರ, ವೆಂಕಟಾಪುರ ಗ್ರಾಮಗಳಿಗೆ ಡಂಗುರ ಸಾರಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ತಿಳಿಸಲಾಗಿದೆ.

ತುಂಗಭದ್ರಾ ಜಲಾಶಯದ ಎರಡು ಅಡಿ ಎತ್ತರದ ಮೂಲಕ 3 ಗೇಟ್ ಒಂದು ಅಡಿ ಇಳಿಸಿ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ. 1629.16 ಅಡಿ ನೀರಿದ್ದು, 90.940 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು ಆಧರಿಸಿ ಇನ್ನಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆಯಿದೆ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.