ಜಿಲ್ಲೆ

ಜಿ-೨೦ ಪ್ರತಿನಿಧಿಗಳಿಂದ ಯೋಗ ಅಭ್ಯಾಸ

Vijayanagara - Veerendra

ಹಂಪಿ ಪಟ್ಟಾಭಿರಾಮ ದೇವಸ್ಥಾನದಲ್ಲಿ ಯೋಗ

ಹೊಸಪೇಟೆ: ಹಂಪಿಯಲ್ಲಿ ಆಯೋಜಿಸಿರುವ ಜಿ-೨೦ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ೩ನೇ ಸಭೆಯ ಕೊನೆಯ ದಿನವಾದ ಬುಧವಾರ ಶ್ರೀಪಟ್ಟಾಭಿರಾಮ ದೇವಸ್ಥಾನದ ಪ್ರಾಂಗಣದಲ್ಲಿ ನೂರಾರು ವಿದೇಶಿ ಗಣ್ಯರು ಒಟ್ಟಾಗಿ ಯೋಗ ಅಭ್ಯಾಸ ನಡೆಸಿದರು.

ಬೆಳಗ್ಗೆ ೬ ರಿಂದ ೭.೩೦ರ ವರೆಗೆ ಆಯುಷ್ ಇಲಾಖೆಯ ನುರಿಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಓಂಕಾರ, ಗಾಯತ್ರಿ ಮಂತ್ರ ಪಠಣದೊಂದಿಗೆ ಆರಂಭಗೊAಡ ಯೋಗದಲ್ಲಿ ಸರಳ ವ್ಯಾಯಾಮದೊಂದಿಗೆ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ಅರ್ಧ ಉಷ್ಟಾçಸನ, ವಜ್ರಾಸನ ಹಾಗೂ ಪದ್ಮಾಸನದಲ್ಲಿ ಪ್ರಾಣಾಯಮ ಮಾಡಿದರು. ಬಳಿಕ ಸುಖಾಸನದಲ್ಲಿ ಸುಮಾರು ೧೦ ನಿಮಿಷಗಳ ಕಾಲ ಧ್ಯಾನಕ್ಕೆ ಮೊರೆ ಹೋದರು. ಹಂಪಿಯ ಐತಿಹಾಸಿಕ ಪಟ್ಟಾಭಿರಾಮ ಸನ್ನಿಧಾನದ ಆವರಣದ ಪ್ರಾಶಾಂತವಾದ ವಾತಾವರಣ ಹಾಗೂ ಗುಬ್ಬಚ್ಚಿಗಳ ಚಿಲಿಪಿಲಿಯ ನಾದ ಧ್ಯಾನವನ್ನು ಉತ್ತುಂಗಕ್ಕೆ ಕೊಂಡೊಯ್ಯಿತು.

ಬಳಿಕ ಓಂಕಾರ ಹಾಗೂ ಶಾಂತಿ ಮಂತ್ರದೊAದಿಗೆ ಯೋಗ ಅಭ್ಯಾಸ ಸಂಪನ್ನಗೊAಡಿತು.