ಹಂಪಸಾಗರ ಗ್ರಾಪಂ ಅಧ್ಯಕ್ಷೆಯಾಗಿ ಕಂಬಳಿ ಹೇಮಾವತಿ ಹಾಗೂ ಉಪಾಧ್ಯಕ್ಷೆಯಾಗಿ ಭಜಂತ್ರಿ ರೇಣುಕಮ್ಮ ಆಯ್ಕೆಯಾದರು. ಗ್ರಾ.ಪಂ. ಸದಸ್ಯರಾದ ಮಂಜುನಾಥ ವಾಲ್ಮೀಕಿ, ಮಮತಾ ಎಂ.ಮಂಜುನಾಥ ತಳವಾರ್, ಚನ್ನಬಸಪ್ಪ ಮೊರನಾಳ, ಮುಖಂಡರಾದ ಏಣಿಗಿ ಪಕ್ಕೀರಸಾಬ್, ಭಜಂತ್ರಿ ಗೋಣೆಪ್ಪ ಇತರರಿದ್ದರು. 
ಜಿಲ್ಲೆ

ಹಂಪಸಾಗರ ಗ್ರಾಪಂಗೆ ಹೇಮಾವತಿ ಅಧ್ಯಕ್ಷೆ

ಶ್ರೀನಾಥ

ಹಗರಿಬೊಮ್ಮನಹಳ್ಳಿ: ಹಂಪಸಾಗರ ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಕಂಬಳಿ ಹೇಮಾವತಿ ಉಮೇಶಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಭಜಂತ್ರಿ ರೇಣುಕಮ್ಮ ಗೋಣೆಪ್ಪ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಆರ್.ಕವಿತಾ ಕಾರ್ಯನಿರ್ವಹಿಸಿದರು. ಕಂದಾಯ ನಿರೀಕ್ಷಕ ಆಸೀಫ್ ಅಲಿ, ಪಿಡಿಒ ತಿಪ್ಪೇಸ್ವಾಮಿ, ಕಾರ್ಯದರ್ಶಿ ಮಾಲವಿ ಕೊಟ್ರೇಶ್ ಹಾಗೂ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಗ್ರಾಪಂ ಸದಸ್ಯರು, ಎಪಿಎಂಸಿ ಮಾಜಿ ಉಪಾಧ್ಯಕ್ಷ ದೊಡ್ಡಬಸಪ್ಪ, ಮುಖಂಡರಾದ ಪಕ್ಕೀರಸಾಬ್, ಎಸ್.ಎಸ್.ಸಿದ್ದಪ್ಪ, ಬಿ.ಡಿ.ಕೊಟ್ರೇಶಪ್ಪ, ರೇಖಾನಾಯ್ಕ, ಆನಂದ, ಕೆ.ವೆಂಕಟೇಶ, ಸುಭಾಷ್, ವೆಂಕಟೇಶ, ಮೊರ್ನಾಳ್ ಗುರುಸಿದ್ದಪ್ಪ, ಗೋಣೆಪ್ಪ, ಶಂಕರಗೌಡ, ಆರ್ನೂರು ಬಸವರಾಜ್, ಹರೀಶ್, ತಟ್ಟಿ ಭರಮಣ್ಣ, ದುರ್ಗದ ರಾಮಣ್ಣ, ಅಡಿವೀರಪ್ಪ, ಓಂಕಾರಪ್ಪ, ಬಿ.ಬಸವರಾಜ, ಮಂಜುನಾಥ, ಆಂದ್ರಾಳ್ ಉಮೇಶ್ ಇತರರಿದ್ದರು.