ಜಿಲ್ಲೆ

ಹಂಪನಕಟ್ಟೆ ಬಳಿ ದೈತ್ಯಾಕಾರದ ಮರದ ಕೊಂಬೆ ದರೆಗೆ

Mangaluru - Shravan Kumar Nala

ಮಂಗಳೂರು: ನಗರದ ಹಂಪನಕಟ್ಟೆ ಸಮೀಪದ ಅಪ್ಪಣ್ಣ ಕಟ್ಟೆ ಶೆಟ್ಟಿ ಆಟೋ ಪಾರ್ಕ್ ಬಳಿ ದೈತ್ಯಾಕಾರದ ಮರದ ಕೊಂಬೆಯೊಂದು ಮುರಿದು ಬಿದ್ದು ಮೂವರು ವಿದ್ಯಾರ್ಥಿನಿಯರು ತೀವ್ರ ಗಾಯಗೊಂಡ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಂಪನಕಟ್ಟೆ ಪ್ರದೇಶ ಜನನಿಬಿಡವಾಗಿದ್ದು, ಏಕಾಏಕಿ ಮರದ ಕೊಂಬೆ ಮುರಿದು ಬಿದ್ದ ಸಂದರ್ಭದಲ್ಲಿ ಅನೇಕ ಸಾರ್ವಜನಿಕರು ಅಲ್ಲೇ ನಿಂತಿದ್ದು ಬಹು ದೊಡ್ಡ ಅವಘಡವೊಂದು ತಪ್ಪಿದೆ. ಕಳೆದ ವರ್ಷವೇ ಈ ಕೊಬೆ ಮುರಿದ ಸ್ಥಿತಿಯಲ್ಲಿದ್ದು, ಪ್ರಸ್ತುತ ಇದರ ಒಂದು ಬಾಗಕ್ಕೆ ಗೆದ್ದಲು ಹಿಡಿದಿತ್ತು. ಕೊಬೆಯ ಭಾರಕ್ಕೆ ಸೋಮವಾರ ಏಕಾಏಕಿ ಕೊಂಬೆ ಮುರಿದು ಬಿದ್ದಿದೆ.

*ತೆರವಿಗೆ ಕೂಡಲೇ ಕ್ರಮ: ಅಧಿವೇಶನದಲ್ಲಿರುವ ಶಾಸಕ ವೇದವ್ಯಾಸ ಕಾಮತ್ ರವರು ವಿಷಯ ತಿಳಿದ ಕೂಡಲೇ ನಿಕಟಪೂರ್ವ ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರವರನ್ನು ಸ್ಥಳಕ್ಕೆ ಭೇಟಿ ನೀಡುವಂತೆ ಸೂಚಿಸಿ, ಜಿಲ್ಲಾಧಿಕಾರಿ ಹಾಗೂ ನಗರ ಪಾಲಿಕೆ ಆಯುಕ್ತರಿಗೆ ಕರೆ ಮಾಡಿ ಗಾಯಾಳುಗಳ ಚಿಕಿತ್ಸಾ ವೆಚ್ಚ ಸಹಿತ ಕೊಂಬೆಯ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಕ್ಷಿೂಚಿಸಿದರು.