ಜಿಲ್ಲೆ

ಹಂಪನಕಟ್ಟೆ ಜನರೇಟರ್ ಬೆಂಕಿಗಾಹುತಿ, ತಪ್ಪಿದ ದುರಂತ

ಹರೀಶ ಎಂ.

ಮಂಗಳೂರು: ಹಂಪನಕಟ್ಟೆಯ ಮಿನಿ ವಿಧಾನ ಸೌಧ ಕಟ್ಟಡದ ಆವರಣದಲ್ಲಿರುವ ಜನರೇಟರ್ ಗುರುವಾರ ಮುಂಜಾನೆ ಬೆಂಕಿಗೆ ಆಹುತಿಯಾಗಿದೆ.

ಕ್ಲಾಕ್‌ಟವರ್ ಬಳಿಯಿಂದ ರೈಲ್ವೇ ಸ್ಟೇಷನ್ ಕಡೆಗೆ ಸಾಗುವ ರಸ್ತೆಗೆ ಹೊಂದಿಕೊಂಡಂತೆ ತಾಲೂಕು ಪಂಚಾಯತಿ ಕಟ್ಟಡದ ಹಿಂಭಾಗದಲ್ಲಿ ಜನರೇಟರ್ ಇರಿಸಲಾಗಿದೆ. ಗುರುವಾರ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ತತ್‌ಕ್ಷಣ ಪಾಂಡೇಶ್ವರ ಅಗ್ನಿ ಶಾಮಕ ದಳದ ಸಿಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಪಕ್ಕದಲ್ಲೇ ವಿದ್ಯುತ್ ಟ್ರಾನ್‌ಸ್ಾರ್ಮರ್ ಕೂಡಾ ಇತ್ತು. ಆರಂಭಿಕ ಹಂತದಲ್ಲೇ ಬೆಂಕಿ ನಂದಿಸಿದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ.

ಬೆಂಕಿ ಬೀಳುವ ವೇಳೆ ಜನರೇಟರ್ ಚಾಲನ ಸ್ಥಿತಿಯಲ್ಲಿ ಇರಲಿಲ್ಲ. ಯಾರೋ ಉದ್ದೇಶ ಪೂರ್ವಕವಾಗಿ ಬೆಂಕಿ ಹಾಕಿರುವ ಸಾಧ್ಯತೆಯಿದೆ ಎಂದು ಸ್ಥಳೀಯರು ತಿಳಿಸಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.