ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾ.ಪಂ. ಅಧ್ಯಕ್ಷರಾಗಿ ಅಬಾಸಾಹೇಬ ಹಾಲನಗೌಡ ಬಹದ್ದೂರ ದೇಸಾಯಿ ಹಾಗೂ ಉಪಾಧ್ಯಕ್ಷರಾಗಿ ಕಸ್ತೂರೆವ್ವ ಗುಡದಪ್ಪ ತಳವಾರ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ರಮೇಶ ಎಚ್. ಅವರು ತಿಳಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾ.ಪಂ. ವ್ಯಾಪ್ತಿಯ ಹಿರಿಯರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಅಧ್ಯಕ್ಷ ಅಬಾಸಾಹೇಬ ಬಹದ್ದೂರದೇಸಾಯಿ ಮಾತನಾಡಿ, ಎಲ್ಲರ ಸಹಕಾರ ಪಡೆದು ಗ್ರಾ.ಪಂ. ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.
ರವಿಚಂದ್ರ ಬಂಡಿವಡ್ಡರ, ಸಿದ್ದವ್ವ ಕರಿಗಾರ, ನಾಗರಾಜ ಮದ್ದೀನ, ಶಿವಾನಂದ ಮೇಟಿ, ದೇವಕ್ಕ ಮಾದರ, ಮಹದೇವಕ್ಕ ಭಜಂತ್ರಿ, ಪೂಜಾ ಕಮ್ಮಾರ, ಶಕಿಲಾ ವಡ್ಡಟ್ಟಿ, ನಾಗಪ್ಪ ಸೊಪ್ಪಿನ, ಇಸ್ಮಾಯಿಲ್‌ಸಾಬ್ ತಂಬ್ರಳ್ಳಿ, ಕೇಶಪ್ಪ ರೋಣದ, ದಾವಲಸಾಬ್ ಬೂದಿಹಾಳ, ಧರ್ಮಪ್ಪ ಚೌಡ್ಕಿ, ಮೈಲಾರಪ್ಪ ಮದ್ದೀನ, ಎಸ್.ಎಸ್.ಡೊಳ್ಳಿನ, ಫಕ್ಕಿರೇಶ ಹಳ್ಳಿ, ದಂಡೆಪ್ಪ ಪೂಜಾರ, ಹನುಮಂತ ಮಾದರ ಇತರರು ಇದ್ದರು.