ಜಿಲ್ಲೆ

ಆನಂದ ಭಾಟೆಗೆ "ಹಮೀದ್ ಖಾನ್ ಸಂಗೀತ ಸಾಧಕ'' ಪ್ರಶಸ್ತಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಧಾರವಾಡ ಘರಾಣೆಯ ಪ್ರಸಿದ್ಧ ಸಿತಾರ್ ವಾದಕ ಉಸ್ತಾದ್ ಹಮೀದ್‌ಖಾನ್ ಸ್ಮರಣಾರ್ಥ ಕೊಡಮಾಡುವಸಿತಾರ್ ಮಾ0ತ್ರಿಕ ಉಸ್ತಾದ್ ಹಮೀದ್‌ಖಾನ್ ಸಂಗೀತ ಸಾಧಕ ಪ್ರಶಸ್ತಿ'ಗೆ ಪುಣೆಯ ಹಿರಿಯ ಗಾಯಕ ಪಂ. ಆನಂದ ಭಾಟೆ ಭಾಜನರಾಗಿದ್ದಾರೆ. ಅ. 20ರಂದು ಸಂಜೆ 5 ಗಂಟೆಗೆ ನಗರದ ಸೃಜನಾ ರಂಗಮAದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅತಿಥಿಗಳಾಗಿ ಕವಿ ಜಯಂತ್ ಕಾಯ್ಕಿಣಿ ಭಾಗವಹಿಸುವರು. ನಂತರ ಪ್ರಶಸ್ತಿ ಪುರಸ್ಕೃತ ಆನಂದ ಭಾಟೆ ಅವರಿಂದ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಇದೇವೇಳೆ ಸಂಗೀತವಾದ್ಯ ಉಪಕರಣಗಳ ತಯಾರಕ ಮೀರಜ್‌ನ ನೌಶಾದ್ ಗುಲಾಬ್‌ಸಾಹೇಬ್ ಸಿತಾರಮೇಕರ್ ಅವರನ್ನೂ ಸನ್ಮಾನಿಸುವುದು. ಕಲಾವಿದರಾದ ನೌಶಾದ್ ಮತ್ತು ನಿಶಾದ್ ಹರ್ಲಾಪುರ ಅವರಿಂದ ಗಾಯನ ಜುಗಲ್‌ಬಂದಿ ನಡೆಯಲಿದೆ. ಚಂದ್ರಿಕಾ ಮಾನ್ವಿ ಅವರಿಂದ ಸುಗಮ ಸಂಗೀತ ಮತ್ತು 30ಕ್ಕೂ ಹೆಚ್ಚು ಕಲಾವಿದರ ವಿಶಿಷ್ಟ ಸಂಯೋಜನೆಯ ಸಿತಾರ್ ಮಾಧುರ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಲಾ ಸಂವಹನ ಟ್ರಸ್ಟ್ ತಿಳಿಸಿದೆ.