ವಿಟ್ಲ: ಕೆಂಪು ಕಲ್ಲು ಹಾಕಿಸುವ ವಿಚಾರದಲ್ಲಿ ವ್ಯಕ್ತಿ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರುವಾಯಿ ಗ್ರಾಮ ಬಂಟ್ವಾಳ ನಿವಾಸಿ ಜೋಸ್ ಜೋಸೇಫ್ (64) ಹಲ್ಲೆಗೊಳಗಾಗಿದ್ದು, ಗಾಯಗೊಂಡ ಅವರು ವಿಟ್ಲ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಪೆರುವಾಯಿ ಗ್ರಾಮದ ಮುಕುಡಾಪು ಎಂಬಲ್ಲಿಗೆ ಲಾರಿಯಲ್ಲಿ ಕೆಂಪು ಕಲ್ಲು ತೆಗೆದುಕೊಂಡು ಬಂದಿದ್ದನ್ನು ನೋಡಿದ ಸತೀಶ್ ಕಾಂಪೌಂಡಿನ ಒಳಗೆ ಬಂದು, ಬೇರೆಯವರಿಂದ ಕೆಂಪು ಕಲ್ಲು ಹಾಕಿಸುತ್ತೀಯಾ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿರುವುದಲ್ಲದೆ, ಜೀವ ಬೆದರಿಕೆ ಹಾಕಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ.