ಜಿಲ್ಲೆ

ರಂಗಿನಾಟಕ್ಕೆ ಹಳಿಯಾಳ ಸಜ್ಜು

ವಿನಯ ಹೆಗಡೆ

ಹಳಿಯಾಳ: ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಶುಕ್ರವಾರ ರಂಗು ರಂಗಿನ ಹೊಳಿ ಹಬ್ಬ ಆಚರಣೆ ನಡೆಯಲಿದ್ದು ಗುರುವಾರ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಪ್ರಮುಖ ಭಾಗಗಳಲ್ಲಿ ಕಾಮಣ್ಣ ಮತ್ತು ರತಿದೇವಿಯ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಗುರುವಾರ ಮನೆಯ ಮುಂದೆ ಜನರು ಕಾಮದಹನ ಮಾಡಿ ಹೊಳಿ ಆಚರಿಸಿದ್ದು ಶುಕ್ರವಾರ ಓಕುಳಿ ಬಣ್ಣದಾಟದಲ್ಲಿ ತೊಡಗಲಿದ್ದು, ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಕಾಮದಹನ ನಡೆಯಲಿದೆ.