ಜಿಲ್ಲೆ

ಪೌರ ಕಾರ್ವಿುಕರಿಂದ ಅರೆಬೆತ್ತಲೆ ಪ್ರತಿಭಟನೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಇಲ್ಲಿಯ ಪಾಲಿಕೆ ಕಚೇರಿ ಎದುರು ನೇರ ಪಾವತಿ ಹಾಗೂ ಗುತ್ತಿಗೆ ಪೌರ ಕಾರ್ವಿುಕರು ನಡೆಸುತ್ತಿರುವ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ 3ನೇ ದಿನವೂ ಮುಂದುವರಿಯಿತು. ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಧಾರವಾಡ ಜಿಲ್ಲಾ ಎಸ್​ಸಿ ಎಸ್​ಟಿ ಪೌರ ಕಾರ್ವಿುಕರ ಹಾಗೂ ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಈ ಹೋರಾಟಕ್ಕೆ ಪಾಲಿಕೆ ಕಾಯಂ ಪೌರ ಕಾರ್ವಿುಕರ ಸಂಘ ಸಹ ಬೆಂಬಲ ವ್ಯಕ್ತಪಡಿಸಿದ್ದು ಜು. 22ರಂದು ಕೆಲಸ ಸ್ಥಗಿತಗೊಳಿಸಿ ಹೋರಾಟದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.

ಭೇಟಿ ಮಾಡಲು ಸೂಚನೆ

ಪಾಲಿಕೆ ಆಯುಕ್ತರು ಉಪವಾಸ ಸತ್ಯಾಗ್ರಹ ನಿರತ ಪೌರ ಕಾರ್ವಿುಕರನ್ನು ಭೇಟಿ ಮಾಡಿ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಮೇಯರ್ ರಾಮಪ್ಪ ಬಡಿಗೇರ ಸೂಚಿಸಿದ್ದಾರೆ.

ಅವರ ಅಧ್ಯಕ್ಷತೆಯಲ್ಲಿ ಶನಿವಾರ ಕರೆದ ಸರ್ವಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಉಪ ಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಸಭಾ ನಾಯಕ ತಿಪ್ಪಣ್ಣ.ಮಜ್ಜಗಿ, ಸುವರ್ಣಕಲ್ಲಕುಂಟ್ಲ , ಶಿವು ಹಿರೇಮಠ, ರಾಧಾಬಾಯಿ ಸಫಾರೆ, ವೀಣಾ ಭಾರದ್ವಾಡ, ಬೀರಪ್ಪ.ಖಂಡೇಕರ, ನಜೀರ ಹೊನ್ಯಾಳ, ಪಾಲಿಕೆ ಅಧಿಕಾರಿಗಳು ಇದ್ದರು.