ದೇವದುರ್ಗದಲ್ಲಿ ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪಲ್‌ಗೆ ದೇವದುರ್ಗ ವರ್ತಕರ ವೇದಿಕೆ ಮನವಿ ಸಲ್ಲಿಸಿತು. 
ಜಿಲ್ಲೆ

ಅರ್ಧದಿನ ಲಾಕ್‌ಡೌನ್ ಜಾರಿಗೊಳಿಸಲು ದೇವದುರ್ಗ ಪಟ್ಟಣ ವರ್ತಕರ ವೇದಿಕೆ ಒತ್ತಾಯ

Raichur

ದೇವದುರ್ಗ: ಕರೊನಾ ತಡೆಯಲು ಪಟ್ಟಣದಲ್ಲಿ ಪ್ರತಿನಿತ್ಯ ಅರ್ಧದಿನ ಲಾಕ್‌ಡೌನ್ ಮಾಡುವಂತೆ ಒತ್ತಾಯಿಸಿ ಪುರಸಭೆ ಮುಖ್ಯಾಧಿಕಾರಿ ಶರಣಪ್ಪಗೆ ದೇವದುರ್ಗ ಪಟ್ಟಣ ವರ್ತಕರ ವೇದಿಕೆ ಶುಕ್ರವಾರ ಮನವಿ ಸಲ್ಲಿಸಿತು. ಜನ ಹಾಗೂ ಆರೋಗ್ಯದ ದೃಷ್ಟಿಯಿಂದ ಅರ್ಧದಿನ ಲಾಕ್‌ಡೌನ್ ಮಾಡಬೇಕು. ಇದಕ್ಕೆ ಪಟ್ಟಣದ ವ್ಯಾಪಾರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಜು.6 ರಿಂದ ಅರ್ಧಲಾಕ್‌ಡೌನ್ ಜಾರಿಗೊಳಿಸಬೇಕು. ಬೆಳಗ್ಗೆಯಿಂದ ಮಧ್ಯಾಹ್ನ ಒಂದರವರೆಗೆ ಅಂಗಡಿ ತೆರೆದು ನಂತರ ಲಾಕ್‌ಮಾಡಲಾಗುವುದು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು. ವೇದಿಕೆ ಮುಖಂಡರಾದ ವಿಠ್ಠಲ್ ಹಯ್ಯಳ, ಸತ್ಯನಾರಾಯಣ, ವೆಂಕಟೇಶ, ಸುನಿಲ್‌ಕುಮಾರ, ರಾಘವೇಂದ್ರ, ಮಲ್ಲಿಕಾರ್ಜುನ, ಪ್ರಕಾಶ, ವೀರಣ್ಣ, ಶರಣಗೌಡ, ಲಕ್ಷ್ಮಣ, ಸುರೇಶ ಇತರರಿದ್ದರು.