ಜಿಲ್ಲೆ

ರಂಗನಾಥಸ್ವಾಮಿಯ ಅದ್ದೂರಿ ಮಹಾರಥೋತ್ಸವ

ಹೊನ್ನಾಳಿ: ತಾಲೂಕಿನ ಹಳೆದೇವರ ಹೊನ್ನಾಳಿಯಲ್ಲಿ ಗುರುವಾರ ಲಕ್ಷ್ಮೀಮಾಧವ ರಂಗನಾಥಸ್ವಾಮಿ ಮಹಾರಥೋತ್ಸವ ಸಕಲ ಮಂಗಳವಾದ್ಯದೊಂದಿಗೆ ಅದ್ದೂರಿಯಾಗಿ ಜರುಗಿತು.

ಚಂದ್ರದರ್ಶನದ ನಂತರ ಲಕ್ಷ್ಮೀಮಾಧವ ರಂಗನಾಥಸ್ವಾಮಿಗೆ ಕಂಕಣಧಾರಣೆ, ಮಾ.31 ರಂದು ಧೂಳೆ ಉತ್ಸವ, ಏ.1 ರಂದು ಕುದುರೆ ಉತ್ಸವ, ಏ.2 ರಂದು ಗಜ ಉತ್ಸವ ಹಾಗೂ ರಥಕ್ಕೆ ಕಳಶಧಾರಣೆ ನಡೆಯಿತು.

ಏ.3ರ ಗುರುವಾರ ಮಹಾರಥೋತ್ಸವದ ನಂತರ ಓಕುಳಿ ರಂಗದಾಟ, ಭೂತನಾಥನ ಬಾಳೆಹಣ್ಣಿನ ಸೇವೆ ನೆರವೇರಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಮಾಧುಸ್ವಾಮಿ, ರಥದದಾನಿ ಪ್ರವೀಣ್, ದೇವರಾಜ್, ರಮೇಶಪ್ಪ, ಗದ್ದಿಗೇಶಪ್ಪ, ಶೇಷಯ್ಯ, ಜಗನ್ನಾಥ್, ತಿಮ್ಮಪ್ಪ, ಎ.ಕೆ. ತಿಮ್ಮಪ್ಪ ಮತ್ತು ಗ್ರಾಮದ ಮುಖಂಡರು ಭಾಗಿಯಾಗಿದ್ದರು.