ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಕೊಡುಗೆ ಆದಿಶಕ್ತಿ, ಬಸವಪ್ಪ ದೇಗುಲದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ದೇವಿಗೆ ವಿವಿಧ ತಿಂಡಿಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. 
ಜಿಲ್ಲೆ

ಆದಿಶಕ್ತಿ, ಬಸವಪ್ಪ ದೇಗುಲದಲ್ಲಿ ಹಾಲರವಿ ಸೇವೆ

ಮದ್ದೂರು: ತಾಲೂಕಿನ ದೇಶಹಳ್ಳಿ ಗ್ರಾಮದ ಶ್ರೀ ಕೊಳ್ಳಿ ಕೊಡುಗೆ ಆದಿಶಕ್ತಿ, ಬಸವಪ್ಪ ದೇಗುಲದಲ್ಲಿ ಗುರುವಾರ ಆಷಾಢ ಮಾಸದ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು.\

ಬೆಳಗ್ಗೆ ಹೂ ಹೊಂಬಾಳೆ ಸಮೇತ ಬಸವಪ್ಪನವರಿಗೆ 108 ಹಾಲರವಿ ಸೇವೆ ಮಾಡಲಾಯಿತು. ಬಳಿಕ ದೇವಿಗೆ ಅಭಿಷೇಕ ನೆರವೇರಿತು. ಅಲ್ಲದೆ ಲಾಡು, ಚಕ್ಕುಲಿ, ಕೊಡಬಳೆ ಸೇರಿದಂತೆ ವಿವಿಧ ತಿಂಡಿಗಳು ಹಾಗೂ ಹೂವುಗಳು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.