ಹುನಗುಂದದ ಶರಣ ದಂಪತಿ ಶ್ವೇತಾ ಹಾಗೂ ಪ್ರೊ.ಬಿ.ಎ. ಕಂಠಿಯವರ ಮನೆಯಲ್ಲಿ ನಡೆದ ಡಾ..ಗು. ಹಳಕಟ್ಟಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗುರುಮಹಾಂತ ಸ್ವಾಮಿಗಳು ಮಾತನಾಡಿದರು. ಶಿಕ್ಷಕ ಪ್ರಭು ಮಾಲಗಿತ್ತಿಮಠ, ಪ್ರೊ. ಎಸ್.ಎನ್. ಹಾದಿಮನಿ, ಕಾರ್ಯದರ್ಶಿ ಸಂಗಮೇಶ ಹೊದ್ಲೂರ ಇತರರಿದ್ದರು. 
ಜಿಲ್ಲೆ

ವಚನ ಸಾಹಿತ್ಯದ ಸಂರಕ್ಷಕ ಹಳಕಟ್ಟಿ

ಹುನಗುಂದ: ಹನ್ನರಡನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಮನೆ, ಮಠಗಳಿಗೆ ಭೇಟಿ ನೀಡಿ ವಚನಗಳ ತಾಡೋಲೆಗಳನ್ನು ಸಂಗ್ರಹಿಸಿ ಮುದ್ರಿಸಿ ಇಡೀ ವಿಶ್ವಕ್ಕೆ ವಚನ ಸಾಹಿತ್ಯದ ಆವಿಷ್ಕಾರ ಮಾಡಿದ ಕೀರ್ತಿ ಡಾ. . ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಚಿತ್ತರಗಿಯ ಗುರು ಮಹಾಂತ ಸ್ವಾಮಿಗಳು ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ತಾಲೂಕು ವಚನ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶರಣ ದಂಪತಿ ಶ್ವೇತಾ ಹಾಗೂ ಪ್ರೊ.ಬಿ.ಎ. ಕಂಠಿಯವರ ಮನೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ..ಗು. ಹಳಕಟ್ಟಿ ಅವರ 144 ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಹಳಕಟ್ಟಿಯವರು ಒಮ್ಮೆ ರಬಕವಿಗೆ ಮಂಚಾಲೆ ಶರಣರ ಮನೆಗೆ ಹೋದಾಗ ಅವರ ಮನೆಯ ಪೂಜಾ ಕೊಠಡಿಯಲ್ಲಿ ತಾಡೋಲೆಗಳ ಕಟ್ಟನ್ನು ಕಂಡರು. ಇವು ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯದ ಕಟ್ಟು, ತಮಗೆ ನೀಡಲು ವಿನಂತಿಸಿದರು. ಆ ತಾಡೋಲೆ ಕಟ್ಟುಗಳನ್ನು ತೆಗೆದುಕೊಂಡು ಬಂದು ವಚನ ಸಾಹಿತ್ಯದ ವಚನಗಳನ್ನು ಮನೆ ಮನೆಗಳಿಗೆ, ಮಠಮಾನ್ಯಗಳಿಗೆ ಭೇಟಿ ನೀಡಿ ಸಂಗ್ರಹಿಸಿದರು. ಅವುಗಳನ್ನು ಮುದ್ರಿಸಲು ಹಣವಿಲ್ಲದಿದ್ದಾಗ ತಮ್ಮ ಮನೆ ಮಾರಿ ಆ ಹಣದಿಂದ ಮುದ್ರಣಾಲಯ ಪ್ರಾರಂಭಿಸಿದರು. ವಚನ ಸಾಹಿತ್ಯದ ವಚನಗಳನ್ನು ಹಲವಾರು ಸಂಪುಟಗಳಲ್ಲಿ ಮುದ್ರಿಸಿ ವಚನ ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಆವಿಷ್ಕಾರ ಮಾಡಿದ್ದಾರೆ ಎಂದರು.

ಶಿಕ್ಷಕ ಪ್ರಭು ಮಾಲಗಿತ್ತಿಮಠ ಮಾತನಾಡಿ, ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನ ಸಂಕಲನ ಕೃತಿಗಳು ಸಾರಸ್ವತ ಲೋಕದ ಮಾಣಿಕ್ಯಗಳಾಗಿವೆ ಎಂದರು.
ಪ್ರೊ. ಎಸ್.ಎನ್. ಹಾದಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯದರ್ಶಿ ಸಂಗಮೇಶ ಹೊದ್ಲೂರ ಸ್ವಾಗತಿಸಿ, ವಂದಿಸಿದರು. ಭಕ್ತಿ ಸೇವೆ ಮಾಡಿದ ಪ್ರೊ.ಬಿ.ಎ. ಕಂಠಿ ಶರಣ ದಂಪತಿಯನ್ನು ಪೂಜ್ಯರು ಗೌರವಿಸಿದರು.