ಹಲಗೂರು: ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮವನ್ನು ಖಂಡಿಸಿ ವಿವಿಧ ಕನ್ನಡಪರ ಹಾಗೂ ರೈತಪರ ಸಂಘಟನೆಯ ಒಕ್ಕೂಟಗಳು ಹಲಗೂರು ಮತ್ತು ಹಾಡ್ಲಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.
ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಹಲಗೂರು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು, ಜವಳಿ ವರ್ತಕರು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದರು. ಆಟೋ ಚಾಲಕರು ಬೆಂಬಲ ಸೂಚಿಸಿದ್ದರು.
ಪ್ರತಿಭಟನಾಕಾರರು ಮುಖ್ಯರಸ್ತೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ಕೆಲಕಾಲ ಬೆಂಗಳೂರು-ಮೈಸೂರು ರಸ್ತೆ ತಡೆದು ಪ್ರತಿಭಟಿಸಿ, ಉಪ ತಹಸೀಲ್ದಾರ್ ಸುನೀಲ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕುಂತೂರು ಸೋಮಶೇಖರ್, ನಾಗೇಶ್, ಕರಿಗೌಡ, ಸುರೇಂದ್ರ, ತಮ್ಮಣಗೌಡ, ಎ.ಟಿ.ಶ್ರೀನಿವಾಸ್, ಸದಾಶಿವ ಅಂಕನಹಳ್ಳಿ, ಶ್ರೀಧರ್, ಗಂಗಾಧರ, ಶಿವರಾಜ್ ಕನ್ನಡಿಗ, ಕೃಷ್ಣ ಎನ್.ಹಲಸಹಳ್ಳಿ, ಮಂಜು, ರಾಜು ನರೀಪುರ, ವೆಂಕಟೇಶ್, ಬಾಲಚಂದ್ರ, ರವಿ ಮೋದಿ, ಗಿರೀಶ್ ಕನ್ನಡ, ಸಂತೋಷ, ಕುಮಾರ ಸ್ವಾಮಿ, ಚಿಕ್ಕರಾಜು, ವಿಜಯ್, ಶಿವರಾಜ್ ಇತರರು ಇದ್ದರು.