ಮುದಗಲ್: ಐತಿಹಾಸಿಕ ಹಾಲಭಾವಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ವೀರಭದ್ರೇಶ್ವರ ಭಾವಚಿತ್ರದ ಮೆರವಣಿಗೆ ಜರುಗಿತು.
ಕುಂಭ, ಕಳಸ, ಜಾನಪದ ಕಲೆ ಹಾಗೂ ವಾಧ್ಯಗಳು ಗಮನಸೆಳೆದವು.
ನಂತರ ದೇವಸ್ಥಾನದ ಮುಂಭಾಗದಲ್ಲಿ ಅಗ್ನಿಕುಂಡ ಹಾಯುವುದರ ಮೂಲಕ ಭಕ್ತರು ಇಷ್ಟಾರ್ಥ ಸಿಧ್ಧಿಗಾಗಿ ಪ್ರಾರ್ಥಿಸಿದರು.
ಮೆರವಣಿಗೆಯಲ್ಲಿ ಗ್ರಾಮಸ್ಥರಾದ ಶಿವಾನಂದ ಸುಂಕದ, ಮಲ್ಲಣ್ಣ ಮಾಟೂರು, ವಿರೂಪಾಕ್ಷಪ್ಪ ಸಜ್ಜನ, ಲಿಂಗಪ್ಪ ಹಣಗಿ, ನಾಗರಾಜ ದಫೇದಾರ, ಬಸವರಾಜ ಬಳಿಗೇರ, ಮಹಾಂತೇಶ ಗದ್ದಿ, ಲಕ್ಷ್ಮೀ ಕೋರಿಶೆಟ್ಟಿ, ತೋಟಮ್ಮ, ಈರಪ್ಪ ಗುಡೂರು ಇತರರಿದ್ದರು.