ಕಂಪ್ಲಿಯ ಹಕ್ಕಿಪಿಕ್ಕಿ ಕಾಲನಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ಭವಾನಿಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಶಾಸಕ ಜೆ.ಎನ್.ಗಣೇಶ್, ಸಿಸಿಬಿ ಪಿಐ ಡಾ.ಬಿ.ಎಸ್.ಸುಧಾಕರ, ಪ್ರಮುಖರಾದ ಪಿ.ಮೂಕಯ್ಯಸ್ವಾಮಿ, ಎಚ್.ಪಿ.ಶಿಕಾರಿರಾಮು, ಆದಿತ್ಯ ಚಿಕ್ಕಣ್ಣ ಇತರರಿದ್ದರು. 
ಜಿಲ್ಲೆ

ಹಕ್ಕಿಪಿಕ್ಕಿ ಜನರ ಅಭಿವೃದ್ಧಿಗೆ ಸಹಕರಿಸಿ

ನರೇಶ್ ಕುಮಾರ್

ಕಂಪ್ಲಿ: ಹಕ್ಕಿಪಿಕ್ಕಿ ಜನಾಂಗ ಅಭಿವೃದ್ಧಿ ಹೊಂದಲು ಸರ್ವ ಸಮುದಾಯಗಳು ಸಹಕರಿಸಬೇಕು ಎಂದು ಬೆಂಗಳೂರಿನ ಸಿಸಿಬಿ ಪಿಐ ಡಾ.ಬಿ.ಸುಧಾಕರ್ ಹೇಳಿದರು.

ಇಲ್ಲಿನ ಹಕ್ಕಿಪಿಕ್ಕಿ ಕಾಲನಿಯಲ್ಲಿ ಸೋಮವಾರ ಶ್ರೀ ತುಳಜಾಭವಾನಿ ಸೇವಾ ಟ್ರಸ್ಟ್, ಜಿಲ್ಲಾ ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಕ್ಕಿಪಿಕ್ಕಿ ಸಮುದಾಯದವರನ್ನು ಸಮಾಜಮುಖಿಯಾಗಿ ಮುನ್ನೆಲೆಗೆ ತರಲು ಶ್ರಮಿಸುತ್ತೇನೆ. ಪ್ರತಿಯೊಬ್ಬರೂ ಡಾ.ಅಂಬೇಡ್ಕರ್, ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ಹಕ್ಕಿಪಿಕ್ಕಿ ಸಮುದಾಯ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದರು.

ಡಿವೈಎಸ್ಪಿ ಪ್ರಸಾದ್ ಗೋಖಲೆ, ಕಲಬುರಗಿಯ ಸಾಹಿತಿ ಡಾ.ಶಿವರಂಜನ ಸತ್ಯಂಪೇಟೆ, ವಾಸ್ತುತಜ್ಞ ರಾಮಚಂದ್ರರಾವ್‌ಗೆ ಭವಾನಿಶ್ರೀ ಪ್ರಶಸ್ತಿ, ಕಲಬುರಗಿ ವಿವಿ ಸಿಂಡಿಕೇಟ್ ಸದಸ್ಯ ರಾಘವೇಂದ್ರರಾವ್ ಎಂ.ಬೈರಪ್ಪ, ವಿಜಯಪುರ ಕ್ರೀಡಾಪಟು ಅಶ್ವಿನಿಕಾಳೆ, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಪದಾಧಿಕಾರಿಗಳಾದ ಪಿ.ಮೂಕಯ್ಯಸ್ವಾಮಿ, ಬಿ.ನಾರಾಯಣಪ್ಪ ಇತರರಿದ್ದರು.