ಕಂಪ್ಲಿ ಹಕ್ಕಿಪಿಕ್ಕಿ ಕಾಲನಿಯ ತುಳಜಾಭವಾನಿ ದೇವಸ್ಥಾನದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ ಮಾತನಾಡಿದರು. ನೀತಿ ಆಯೋಗದ ಉಪ ಸಲಹೆಗಾರ ಡಾ.ಮುನಿರಾಜ, ಡಾ.ಕೆ.ಎಂ.ಮೇತ್ರಿ, ದಿವಾಕರ, ಎಚ್.ಪಿ.ಶಿಕಾರಿ ರಾಮು, ಕೆ.ವಿರೂಪಾಕ್ಷಿ ಇತರರಿದ್ದರು. 
ಜಿಲ್ಲೆ

ಹಕ್ಕಿಪಿಕ್ಕಿ ಕಾಲನಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್

ನರೇಶ್ ಕುಮಾರ್

ಕಂಪ್ಲಿ: ಹಕ್ಕಿಪಿಕ್ಕಿ ಕಾಲನಿ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿ ಕಳಿಸಿದಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಅನುದಾನ ಒದಗಿಸಿಕೊಡಲಾಗುವುದು ಎಂದು ದೆಹಲಿಯ ನೀತಿ ಆಯೋಗದ ಉಪ ಸಲಹೆಗಾರ ಡಾ.ಮುನಿರಾಜ ಹೇಳಿದರು.

ಇಲ್ಲಿನ ಆದಿವಾಸಿ ಬುಡಕಟ್ಟು ಹಕ್ಕಿಪಿಕ್ಕಿ ಕಾಲನಿಯಲ್ಲಿ ಗುರುವಾರ ಹಕ್ಕಿಪಿಕ್ಕಿ ಜನರೊಂದಿಗೆ ಸಮಾಲೋಚಿಸಿ ಮಾತನಾಡಿದರು. ಹಕ್ಕಿಪಿಕ್ಕಿ ಕಾಲನಿ ಅಭಿವೃದ್ಧಿ, ಸಮುದಾಯದ ಮಕ್ಕಳ ಶಾಲೆ ಅಭಿವೃದ್ಧಿಗೊಳಿಸಲಾಗುವುದು. ಮಕ್ಕಳಿಗೆ ಉನ್ನತ ಶಿಕ್ಷಣ, ಹುದ್ದೆ ಕೊಡಿಸುವಲ್ಲಿ ಪಾಲಕರು ಜಾಗೃತಿ ತೋರಬೇಕು ಎಂದರು.

ಸಮುದಾಯದ ಪ್ರಮುಖ ಎಚ್.ಪಿ.ಶಿಕಾರಿರಾಮು ಮಾತನಾಡಿ, 1971ರಲ್ಲಿ 17 ಜನರಿಗೆ ನೀಡಿದ್ದ ನಿವೇಶನದಲ್ಲಿ 169 ಕುಟುಂಬಗಳು ವಾಸವಾಗಿವೆ. ಪರ್ಯಾಯವಾಗಿ ಹಕ್ಕಿಪಿಕ್ಕಿ ಕಾಲನಿ ನಿರ್ಮಿಸಿಕೊಡಬೇಕು. ಹಕ್ಕಿಪಿಕ್ಕಿ ಮಕ್ಕಳ ಬೋಧನೆಗೆ ಹಕ್ಕಿಪಿಕ್ಕಿ ಸಮುದಾಯದ ಶಿಕ್ಷಕರನ್ನೇ ನೇಮಿಸಬೇಕು. ಹಕ್ಕಿಪಿಕ್ಕಿಗಳ ವಲಸೆ ತಪ್ಪಿಸಲು ಉಳುಮೆಗೆ ಭೂಮಿ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡ ವಿವಿ ಪ್ರಾಧ್ಯಾಪಕ ಡಾ.ಕೆ.ಎಂ.ಮೇತ್ರಿ, ಸಮಾಜ ಕಲ್ಯಾಣಾಧಿಕಾರಿ ಬಿ.ಮಲ್ಲಿಕಾರ್ಜುನ, ಎಸ್ಟಿ ಕಲ್ಯಾಣಾಧಿಕಾರಿ ದಿವಾಕರ, ನಿಲಯ ಪಾಲಕ ಕೆ.ವಿರೂಪಾಕ್ಷಿ, ವ್ಯವಸ್ಥಾಪಕ ಗಾದಿಲಿಂಗಪ್ಪ, ಸರ್ಕಾರಿ ಕಿಪ್ರಾ ಶಾಲೆ ಮುಖ್ಯಶಿಕ್ಷಕ ವಸಂತ್, ಎಚ್.ಪಿ.ಶ್ರೀಕಾಂತ, ಜಾನಕಿ, ಬಾಬು, ಗೋಪಿ, ಈರಣ್ಣ ಇತರರಿದ್ದರು.