ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ದಲಿತ ಸಂಘಟನೆಗಳ ಒಕ್ಕೂಟ ಮನವಿ ಸಲ್ಲಿಸಿತು. ಮುಖಂಡರಾದ ಹನುಮಂತಪ್ಪ ಮನ್ನಾಪುರ, ವೆಂಕಟೇಶ ಜಾಲಹಳ್ಳಿ, ಭೀಮಣ್ಣ ಅಂಜಳ, ರಮೇಶ ಹೇರುಂಡಿ, ಲಕ್ಷ್ಮಣ ಮಸರಕಲ್, ವಿಶ್ವನಾಥ ಬಲ್ಲಿದವ್, ಶಿವರಾಜ ಇತರರಿದ್ದರು. 
ಜಿಲ್ಲೆ

ಹೇರುಂಡಿ ರೈತ ಯಲ್ಲಪ್ಪಗೆ ಪರಿಹಾರ ನೀಡಿ

ದೇವದುರ್ಗ: ತಾಲೂಕಿನ ಜಾಲಹಳ್ಳಿ ಹೋಬಳಿಯ ಹೇರುಂಡಿ ಗ್ರಾಮದಲ್ಲಿ ರೈತ ಯಲ್ಲಪ್ಪ ದುರುಗಪ್ಪಗೆ ಅವರ ಹತ್ತಿ ಬೆಂಕಿಗೆ ಭಸ್ಮವಾಗಿದ್ದು ಕಂದಾಯ ಇಲಾಖೆ ಪರಿಶೀಲನೆ ಮಾಡಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ದಲಿತ ಸಂಘಟನೆಗಳ ಒಕ್ಕೂಟ ಸೋಮವಾರ ಮನವಿ ಸಲ್ಲಿಸಿತು.

ಹೇರುಂಡಿ ಗ್ರಾಮದ ರೈತ ಯಲ್ಲಪ್ಪ ದುರುಗಪ್ಪ ಛಲವಾದಿ, ತಮ್ಮ 2.33 ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದಾರೆ. ಹತ್ತಿ ರಾಶಿಗೆ ಬಂದಿದ್ದು ಬಿಡಿಸಿ ತಮ್ಮ ಜಮೀನನಲ್ಲೇ ಸಂಗ್ರಹಿಸಿದ್ದಾರೆ. ಆದರೆ, ತಡರಾತ್ರಿ ಹತ್ತಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟುಹೋಗಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಹತ್ತಿ ಬೆಳೆಗಾಗಿ ಸಾವಿರಾರು ರೂ. ಖರ್ಚು ಮಾಡಿದ್ದಾರೆ.

ಬಿತ್ತನೆ ಬೀಜ, ಕ್ರಿಮಿನಾಶಕ, ರಸಗೊಬ್ಬರ, ಕೂಲಿಹಾಳು, ಟ್ರ್ಯಾಕ್ಟರ್ ಸೇರಿ ಸಾವಿರಾರು ಸಾಲ ಮಾಡಿದ್ದಾರೆ. ಹತ್ತಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದ ರೈತನಿಗೆ ಹತ್ತಿ ಬೆಂಕಿಗೆ ಆವುತಿಯಾಗಿದ್ದು ಆಕಾಶ ಕಳಚಿ ಬಿದ್ದಂತಾಗಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿ ರೈತ ಯಲ್ಲಪ್ಪಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.