ನಬೀಸಾಬ್ 
ಜಿಲ್ಲೆ

ಹಗರಿಬೊಮ್ಮನಹಳ್ಳಿ ಯುವಕ ಕರಾಟೆಯಲ್ಲಿ ವಿಜೇತ

ಹಗರಿಬೊಮ್ಮನಹಳ್ಳಿ: ಮಲೇಷಿಯಾದ ಪಿರಾಕ್ ಸ್ಟೇಟ್ಸ್‌ನ ಇಫೊ ನಗರದಲ್ಲಿ ಮೇ 9ರಿಂದ 11ರವರೆಗೆ ಆಯೋಜಿಸಿದ್ದ 21ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಟ್ರೆಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಹಾಗೂ ಕರ್ಮಯೋಗ ಟ್ರಸ್ಟ್‌ನ ಕರಾಟೆ ಪಟು ನಬೀಸಾಬ್ ಗೆಲುವು ಸಾಧಿಸಿದ್ದಾರೆ.

40 ವರ್ಷದ ಒಳಗಿನ ವಯೋಮಿತಿಯ ಕುಮಿತೆ-67 ಕೆ.ಜಿ.ವಿಭಾಗದಲ್ಲಿ ಪ್ರಥಮ ಮತ್ತು ಕಟಾ ವಿಭಾಗದಲ್ಲಿ ದ್ವೀತಿಯ ಸ್ಥಾನ ಪಡೆದಿದ್ದಾರೆ ಎಂದು ತರಬೇತುದಾರ ಕಟ್ಟೇಸ್ವಾಮಿ ತಿಳಿಸಿದ್ದಾರೆ.