ಹಬೊಹಳ್ಳಿ ತಾಲೂಕಿನ ವರಲಹಳ್ಳಿಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಲಸಿಕಾ ಅಭಿಯಾನಕ್ಕೆ ಶಾಸಕ ನೇಮಿರಾಜ್‌ನಾಯ್ಕ ಚಾಲನೆ ನೀಡಿದರು. ಪಶು ವೈದ್ಯಾಧಿಕಾರಿಗಳಾದ ಪ್ರಶಾಂತ್, ಪ್ರಕಾಶ್, ರಾಘವೇಂದ್ರ, ಜೆಡಿಎಸ್ ತಾಲೂಕಾಧ್ಯಕ್ಷ ವೈ.ಮಲ್ಲಿಕಾರ್ಜುನ್, ಪ್ರಮುಖರಾದ ಹೋಟೆಲ್ ಸಿದ್ದರಾಜು, ಬ್ಯಾಟಿ ನಾಗರಾಜ್ ಇತರರಿದ್ದರು. 
ಜಿಲ್ಲೆ

ಕಾಲುಬಾಯಿ ರೋಗ ನಿರ್ಲಕ್ಷಿಸದಿರಿ

ಹಗರಿಬೊಮ್ಮನಹಳ್ಳಿ: ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸುವುದು ಮರೆಯಬಾರದು ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ ಹೇಳಿದರು.

ರಾಷ್ಟ್ರೀಯ ಜಾನುವಾರ ರೋಗ ನಿಯಂತ್ರಣ ಕಾರ್ಯಕ್ರಮದಡಿ ತಾಲೂಕಿನ ವರಲಹಳ್ಳಿಯಲ್ಲಿ ಶನಿವಾರ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕುವ ಅಭಿಯಾನದಲ್ಲಿ ಮಾತನಾಡಿದರು. ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಈ ಮೂಲಕ ಲಸಿಕಾ ಅಭಿಯಾನ ಯಶಸ್ವಿಗೊಳಿಸುವಂತೆ ತಿಳಿಸಿದರು.

ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಸೂರಪ್ಪ ಮಾತನಾಡಿ, 45 ದಿನಗಳವರೆಗೆ ರಾಸುಗಳಿಗೆ ಲಸಿಕೆ ನೀಡಲಾಗುವುದು. 13 ತಂಡಗಳನ್ನು ರಚಿಸಲಾಗಿದ್ದು, ಪ್ರತಿದಿನ 13 ಗ್ರಾಮಗಳಲ್ಲಿ ಲಸಿಕೆ ನೀಡಲಾಗುವುದು. ಬಿಸಿಲಿನ ಪ್ರಖರತೆ ಹೆಚ್ಚಾಗಿರುವ ಕಾರಣ, ಬೆಳಗಿನ ಅವಧಿಯಲ್ಲಿ ಮಾತ್ರ ಲಸಿಕೆ ಹಾಕಲಾಗುವುದು. ಕಾಲುಬಾಯಿ ರೋಗ ತಡೆಗಟ್ಟುವ ಲಸಿಕೆ ಜತೆಗೆ ಈ ಬಾರಿ ವಿಶೇಷವಾಗಿ ಚರ್ಮಗಂಟು ರೋಗ ಹತೋಟಿಗೆ ತರುವ ಲಸಿಕೆಯನ್ನು ಹಾಕುತ್ತಿದ್ದೇವೆ ಎಂದರು.