ಜಿಲ್ಲೆ

ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು

ಮಂಜುನಾಥ

ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀಗಾಳೆಮ್ಮ ದೇಗುಲದ ಬಳಿ ನಿರ್ಮಾಣ ಹಂತದ ಕಟ್ಟಡಕ್ಕೆ, ನೀರು ಬಿಡಲು ಹೋಗಿದ್ದ ವಿದ್ಯಾರ್ಥಿ ಅಣಜಿ ರಿತೀಶ್‌ (17) ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.

ಹತ್ತಿರದ ಕಡಲಬಾಳು ಗ್ರಾಮದ ಯುವಕ ರಿತೀಶ್ ಇಲ್ಲಿನ ತಿಮ್ಮಯ್ಯ ಶೆಟ್ಟಿ ಐಟಿಐ ಕಾಲೇಜ್‌ನಲ್ಲಿ ಎರಡನೇ ವರ್ಷದ ಎಲೆಕ್ಟ್ರೀಷಿಯನ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಮುಗಿದ ಬಳಿಕ ಪಟ್ಟಣದಲ್ಲಿರುವ ಸಂಬಂಧಿಕರ ನಿರ್ಮಾಣ ಹಂತದ ಕಟ್ಟಡಕ್ಕೆ ನೀರು ಬಿಡಲು ತೆರಳಿದ್ದಾನೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.