ಹಗರಿಬೊಮ್ಮನಹಳ್ಳಿ: ಮಕ್ಕಳ ಪ್ರತಿಭೆ ಅನಾವರಣಕ್ಕೆ ‘ಪೆನ್ಸಿಲ್’ ಪತ್ರಿಕೆ ಉತ್ತಮ ವೇದಿಕೆಯಾಗಿದೆ ಎಂದು ಗದ್ದಿಕೆರೆ ಗ್ರಾಪಂ ಉಪಾಧ್ಯಕ್ಷ ರಮೇಶ ಚಲುವಾದಿ ಹೇಳಿದರು.
ತಾಲೂಕಿನ ಗದ್ದಿಕೆರೆ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳ ಸಂಪಾದಕತ್ವದ ಪೆನ್ಸಿಲ್ ದ್ವೈಮಾಸಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ಒಂದು ಪತ್ರಿಕೆ ಪ್ರಕಟಣೆ ಮಾಡುತ್ತಿರಬೇಕು. ಓದು ಬರಹದ ಹವ್ಯಾಸಗಳು ಕಡಿಮೆಯಾಗುತ್ತಿರುವ
ಈ ಕಾಲದಲ್ಲಿ ಮಕ್ಕಳಲ್ಲಿ ಇಂಥ ಹವ್ಯಾಸ ಬೆಳೆಸಬೇಕು ಎಂದರು. ಗ್ರಾಪಂ ಸದಸ್ಯ ಬಸಯ್ಯ ಸ್ವಾಮಿ, ಮುಖ್ಯಶಿಕ್ಷಕ ನಾಗೇಂದ್ರಪ್ಪ ಮೇವುಂಡಿ, ಪತ್ರಿಕೆ ನಿರ್ವಾಹಕ ಬಿ.ಕೊಟ್ರೇಶ್, ಪ್ರಮುಖರಾದ ಟಿ.ಎಸ್.ಮಂಜುನಾಥ, ಎಲ್.ರವಿಚಂದ್ರ ನಾಯ್ಕ, ಎ.ಗೀತಾ, ಬಿ.ಆರ್.ಗಾಯತ್ರಿ, ಕೆ.ರಾಜೇಶ್ವರಿ ಇದ್ದರು.