ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಹಗರಿಬೊಮ್ಮನಹಳ್ಳಿಯಲ್ಲಿ ಉಪತಹಸೀಲ್ದಾರ್ ಶಿವಕುಮಾರಗೌಡಗೆ ವಿವಿಧ ಸಂಘಟನೆಗಳಿಂದ ಮನವಿ ಸಲ್ಲಿಸಲಾಯಿತು. ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ ಶೆಟ್ಟರ್, ಎಚ್.ಎಂ.ನಾಗರಾಜ, ನೀಲಂಠಪ್ಪ ಇತರರಿದ್ದರು. 
ಜಿಲ್ಲೆ

ಅಪಪ್ರಚಾರದ ವಿರುದ್ಧ ಕ್ರಮವಾಗಲಿ

ಶ್ರೀನಾಥ

ಹಗರಿಬೊಮ್ಮನಹಳ್ಳಿ: ಧಾರ್ಮಿಕ ಕ್ಷೇತ್ರಗಳು ಶಾಂತಿ-ಸೌಹಾರ್ದ, ಪಾವಿತ್ರೃದ ಸಂಕೇತವಾಗಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪ ಪ್ರಚಾರ ಸಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಬರೆದ ಮನವಿಯನ್ನು ಉಪತಹಸೀಲ್ದಾರ್ ಶಿವಕುಮಾರಗೌಡಗೆ ವಿವಿಧ ಸಂಘಟನೆಗಳ ಪ್ರಮುಖರು ಸಲ್ಲಿಸಿದರು.

ಪಟ್ಟಣದ ಬಸವೇಶ್ವರ ಬಜಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೊಟ್ರೇಶ ಶೆಟ್ಟರ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ವಹಿಸಬೇಕು.

ನಡೆಯದೇ ಇರುವ ವಿಷಯವನ್ನು ನಡೆದಿರುವಂತೆ ಬಿಂಬಿಸಿ, ಅನಾಮಿಕ ವ್ಯಕ್ತಿಯ ಮಾತಿಗೆ ಮನ್ನಣೆ ನೀಡಿ, ಗುಂಡಿ ಅಗೆಸುತ್ತಿರುವುದು ವ್ಯವಸ್ಥಿತವಾದ ಪಿತೂರಿಯಾಗಿದೆ ಎಂದು ಹೇಳಿದರು.

ಕೊಟ್ಟೂರು ಚಾನುಕೋಟಿ ಮಠದ ಸಿದ್ಧಲಿಂಗ ಶಿವಾಚಾರ್ಯರು, ನಂದಿಪುರ ಮಠದ ಡಾ.ಮಹೇಶ್ವರ ಸ್ವಾಮೀಜಿ, ಹಾಲಸ್ವಾಮಿ ಮಠದ ಶ್ರೀ ಹಾಲಸಿದ್ದೇಶ್ವರ ಸ್ವಾಮೀಜಿ, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ, ಪಂಚಮಸಾಲಿ ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ವೆಂಕೋಬಪ್ಪ, ಹಿಂದು ಜಾಗರಣ ವೇದಿಕೆಯ ಪೂಜಾ, ಪ್ರಮುಖರಾದ ನೀಲಂಕಠಪ್ಪ, ಎಚ್.ಎಂ.ನಾಗರಾಜ, ಲೋಕನಗೌಡ, ಗಣೇಶ, ಪಟ್ಟೇದ ಮಲ್ಲಿಕಾರ್ಜುನ, ಶಂಭುಲಿಂಗಪ್ಪ, ಶ್ರೀಶೈಲ ಸ್ವಾಮಿ, ಬಸವನಗೌಡ್ರು, ಕೊಟ್ರಪ್ಪ, ರತ್ನಮ್ಮ, ಗೌಸಿಯಾ ಇತರರಿದ್ದರು.