ಹಗರಿಬೊಮ್ಮನಹಳ್ಳಿ ತಾಲೂಕು ಪಿಂಜಾರ್ ಹೆಗ್ಡಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ನರೇಗಾ ಯೋಜನೆ ಎಡಿ ರಮೇಶ್ ಮಹಾಲಿಂಗಪುರ, ಗ್ರಾಪಂ ಅಧ್ಯಕ್ಷ ನಾಗರಾಜ ಮುಖ್ಯಶಿಕ್ಷಕ ಇಟ್ಟಿಗಿ ವೀರಣ್ಣ, ಅರಣ್ಯ ಇಲಾಖೆ ಅಧಿಕಾರಿ ಕರಿಬಸಪ್ಪ ಇತರರಿದ್ದರು. 
ಜಿಲ್ಲೆ

ಸಸಿ ನೆಟ್ಟು ಪೋಷಣೆ ಮಾಡಿ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ತಾಲೂಕಿನ ಪಿಂಜಾರ್ ಹೆಗ್ಡಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ತಾಯಿ ಹೆಸರಿನಲ್ಲಿ ಒಂದು ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ನರೇಗಾ ಯೋಜನೆ ಎಡಿ ರಮೇಶ್ ಮಹಾಲಿಂಗಪುರ ಮಾತನಾಡಿ, ಪ್ರತಿಯೊಬ್ಬರೂ ಪರಿಸರದ ಕಾಳಜಿ ಹೊಂದಿರಬೇಕು. ಕೇವಲ ಸಸಿ ನೆಡುವುದಲ್ಲದೆ ಪೋಷಣೆ ಮಾಡಬೇಕು. ತಾಯಿಗಿಂತ ದೇವರಿಲ್ಲ. ಹಾಗಾಗಿ ತಾಯಿಯ ಹೆಸರಿನಲ್ಲಿ ಎಲ್ಲರೂ ಒಂದು ಸಸಿ ನೆಟ್ಟು ಬೆಳೆಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ನಾಗರಾಜ ಮಾತನಾಡಿ, ಹಸಿರು ನಿತ್ಯದ ಉಸಿರಾದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದರು. ಮುಖ್ಯಶಿಕ್ಷಕ ಇಟ್ಟಿಗಿ ವೀರಣ್ಣ, ಅರಣ್ಯ ಇಲಾಖೆ ಅಧಿಕಾರಿ ಕರಿಬಸಪ್ಪ ಇತರರಿದ್ದರು.