ಹಗರಿಬೊಮ್ಮನಹಳ್ಳಿಯ ಪುರಸಭೆ ಕಚೇರಿಯಲ್ಲಿ ಗುರುವಾರ ಮುಖ್ಯಾಧಿಕಾರಿ ಪ್ರಭಾಕರ ಅವರಿಗೆ ಸದಸ್ಯ ಮರಿರಾಮಪ್ಪ ನೇತೃತ್ವದಲ್ಲಿ ಸ್ಥಳೀಯರು ಮನವಿ ಸಲ್ಲಿಸಿದರು. ಪ್ರಮುಖರಾದ ಅಲ್ಲಾಭಕ್ಷಿ, ಸೆರೆಗಾರ್ ಹುಚ್ಚಪ್ಪ, ಡಿಶ್ ಬಾಳಪ್ಪ ಇತರರಿದ್ದರು. 
ಜಿಲ್ಲೆ

ರಸ್ತೆ ನಿರ್ಮಾಣ ಕಾಮಗಾರಿ ವಿಳಂಬಕ್ಕೆ ಖಂಡನೆ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ಪಟ್ಟಣದ 21ನೇ ವಾರ್ಡ್‌ನಲ್ಲಿ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ ವಿಳಂಬ ಖಂಡಿಸಿ ಪುರಸಭೆ ಸದಸ್ಯ ಮರಿರಾಮಪ್ಪ ಹಾಗೂ ಸ್ಥಳೀಯರು ಗುರುವಾರ ಮುಖ್ಯಾಧಿಕಾರಿ ಪ್ರಭಾಕರಗೆ ಮನವಿ ಸಲ್ಲಿಸಿದರು.

ಮರಿರಾಮಪ್ಪ ಮಾತನಾಡಿ, ತೇರುಬೀದಿಯಲ್ಲಿ ನಡೆಯುತ್ತಿರುವ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ಶಾಲಾಮಕ್ಕಳಿಗೆ ತೊಂದರೆಯಾಗುತ್ತಿದೆ.

ಜೆಸಿಬಿಗಳು ಅಗೆದಿರುವ ಗುಂಡಿಗಳನ್ನು ದಾಟಿ ಬರಲು ಪರದಾಡುವ ಪರಿಸ್ಥಿತಿ ಉಂಟಾಗಿದೆ ಅಲ್ಲದೇ ಪಾದಗಟ್ಟೆ ಆಂಜನೇಯ ದೇವಸ್ಥಾನದಿಂದ ಶಾಲೆಯವರೆಗೂ ಚರಂಡಿ ನೀರಿನ ದುರ್ವಾಸನೆಯಿಂದಾಗಿ ಮೂಗುಮುಚ್ಚಿಕೊಂಡು ಓಡಾಡುವ ದುಸ್ಥಿತಿ ಇದೆ.

ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವ ಅನುಮಾನವಿದ್ದು, ಕೆಲಸದ ವಿವರ ನೀಡಬೇಕು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಅಲ್ಲಾಭಕ್ಷಿ, ಸೆರೆಗಾರ್ ಹುಚ್ಚಪ್ಪ, ಡಿಶ್ ಬಾಳಪ್ಪ ಇತರರಿದ್ದರು.