ಜಿಲ್ಲೆ

ಪೌತಿ ಆಂದೋಲನ ಸದುಪಯೋಗಪಡಿಸಿಕೊಳ್ಳಲಿ

ಹಗರಿಬೊಮ್ಮನಹಳ್ಳಿ: ಪೌತಿ ಆಂದೋಲನ ಕಾರ್ಯಕ್ರಮವನ್ನು ರೈತರು ಸದುಪಯೋಗಪಡಿಸಿಕೊಳ್ಳಲಿ ಎಂದು ಗ್ರಾಮ ಲೆಕ್ಕಾಧಿಕಾರಿ ಗುರು ಬಸವರಾಜ ಹೇಳಿದರು.

ತಾಲೂಕಿನ ಮಸಾರಿ ನೆಲ್ಕುದ್ರಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೌತಿ ಆಂದೋಲನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪೌತಿ ಆಂದೋಲನ ಹಮ್ಮಿಕೊಳ್ಳಲಾಗಿದೆ. ವಾರಸುದಾರರ ಹೆಸರಿನಲ್ಲಿರುವ ಕೃಷಿ ಭೂಮಿಗಳು, ಅವರ ವಂಶಸ್ಥರಿಗೆ ಬದಲಾಯಿಸಿಕೊಡುವ ಕಾರ್ಯಕ್ರಮ ಇದಾಗಿದೆ ಎಂದರು.

ಗ್ರಾಮ ಸಹಾಯಕ ತಳವಾರ ಸೋಮಶೇಖರ, ಉಲವತ್ತಿ ವಿಎಸ್‌ಎಸ್‌ಎನ್ ಸದಸ್ಯ ಎಂ.ಕೊಟ್ರೇಶ, ಪ್ರಮುಖರಾದ ಇಟಿಗಿ ಹುಚ್ಚಪ್ಪ, ಕುರಿ ಸುಭಾಷ, ಕೋಲಾರ ಹೊನ್ನಪ್ಪ, ಎನ್.ಜಿ.ಯಲ್ಲಪ್ಪ, ಹಡಪದ ಮಂಜುನಾಥ, ಪೂಜಾರ್ ಸಿದ್ದಪ್ಪ, ಹುಲುಗಪ್ಪ, ಬಿ.ಜಿ.ಗೋಣೆಪ್ಪ, ಮಳಗಿ ದೊಡ್ಡಬಸಪ್ಪ, ಇಟಿಗಿ ಮಹಾಂತೇಶ ಇತರರಿದ್ದರು.