ಹಗರಿಬೊಮ್ಮನಹಳ್ಳಿಯಲ್ಲಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಂದಿನಿಯೊಂದಿಗೆ ಅಮೂಲ್ ಉತ್ಪನ್ನಗಳನ್ನು ವಿಲೀನಗೊಳಿಸದಂತೆ ಆಗ್ರಹಿಸಿ ಉಪ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. 
ಜಿಲ್ಲೆ

ನಂದಿನಿ, ಅಮೂಲ್ ಹಾಲಿನ ಉತ್ಪನ್ನಗಳ ವಿಲೀನಗೊಳಿಸುವ ಕ್ರಮ ಸಲ್ಲದು

ಶಶಿಧರ ಎಲ್

ಹಗರಿಬೊಮ್ಮನಹಳ್ಳಿ: ನಂದಿನಿ ಕೆಎಂಎಫ್ ಹಾಲಿನ ಉತ್ಪನ್ನಗಳನ್ನು ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಕ್ರಮವನ್ನು ಸರ್ಕಾರ ಕೈಬಿಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ವಿಶ್ವೇಶ್ವರಯ್ಯ, ಅನ್ನದಾನೇಶ್ವರಗೆ ಶನಿವಾರ ಮನವಿ ಸಲ್ಲಿಸಿದರು.

ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಬಿ.ಸಿದ್ದನಗೌಡ ಮಾತನಾಡಿ, ರಾಜ್ಯದಲ್ಲಿ ಕೆಎಂಎಫ್ ಒಕ್ಕೂಟದಿಂದ ನಂದಿನಿ ಉತ್ಪನ್ನಗಳು ತಮ್ಮದೇ ಆದ ಉತ್ಕೃಷ್ಟ ಗುಣಮಟ್ಟ ಹೊಂದಿವೆ. ರಾಜ್ಯದ ರೈತರ ಬಹುಪಾಲು ಕೊಡುಗೆಯಿಂದ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿದೆ.

ಪಶು ಸಂಗೋಪನೆಗೆ ಪ್ರೋತ್ಸಾಹ

ನಂದಿನಿ ಹಾಲಿನ ಉತ್ಪಾದನೆ ಹೆಚ್ಚಿಸಿ ಕರ್ನಾಟಕದ ಕೋಟ್ಯಂತರ ರೈತರ ಪಶು ಸಂಗೋಪನೆಗೆ ಸಹಾಯಕವಾಗಲು ಪ್ರೋತ್ಸಾಹ ನೀಡಬೇಕು. ಸರ್ಕಾರ ಯೋಚಿಸಿರುವ ಗುಜರಾತಿನ ಅಮೂಲ್‌ನೊಂದಿಗೆ ವಿಲೀನಗೊಳಿಸುವ ಕ್ರಮ ಕೈಬಿಡಬೇಕೆಂದು ಒತ್ತಾಯಿಸಿದರು.

ರೈತ ಸಂಘದ ಮಹೇಶ್ ಬನ್ನಿಗೋಳ, ಅಲ್ಲಂಬಾಷಾ, ತಂಬ್ರಹಳ್ಳಿ ವೀರಣ್ಣ, ಎಂ.ಜಿ.ಮೃತ್ಯುಂಜಯಗೌಡ, ಜೆ.ಎಂ.ರುದ್ರಮುನಿಸ್ವಾಮಿ, ಆರ್.ಸಿದ್ದರೆಡ್ಡಿ, ಪಿ.ಬಸವನಗೌಡ, ಬೆಳಗುಂದಿ ಯಮನೂರಪ್ಪ, ಎಸ್.ವಿರೇಶ್, ಕೆ.ನಿಂಗಪ್ಪ ಇದ್ದರು.