ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೆರೆ ಗ್ರಾಪಂ ಅಧ್ಯಕ್ಷೆಯಾಗಿ ದಿದ್ಗಿ ಜ್ಯೋತಿ ನಾಗರಾಜ್ ಆಯ್ಕೆಯಾದವರು. ಪ್ರಮುಖರಾದ ಕುಂಟೂರು ನಿಂಗಪ್ಪ, ಭೋಜಪ್ಪ, ಮರಿಲಿಂಗಪ್ಪ, ರಾಚಪ್ಪ, ಮಹೇಶಗೌಡ, ಮೇಟಿ ಗುರುವಪ್ಪ ಇತರರಿದ್ದರು. 
ಜಿಲ್ಲೆ

ಅತ್ತೆ ಬಳಿಕ ಸೊಸೆ ಗ್ರಾಪಂ ಅಧ್ಯಕ್ಷೆ

ಹಗರಿಬೊಮ್ಮನಹಳ್ಳಿ: ಮೋರಗೆರೆ ಗ್ರಾ.ಪಂ. ಅಧ್ಯಕ್ಷೆಯಾಗಿ ದಿದ್ಗಿ ಜ್ಯೋತಿ ನಾಗರಾಜ್ ಅವಿರೋಧವಾಗಿ ಗುರುವಾರ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಆರ್.ಕವಿತಾ ಕಾರ್ಯ ನಿರ್ವಹಿಸಿದರು.

ಸಹಕಾರ ಸಂಘದ ಅಧ್ಯಕ್ಷ ಕೆ.ಸೋಮಶೇಖರ್, ಉಪಾಧ್ಯಕ್ಷ ಕೆ.ನಾಗಪ್ಪ, ಪ್ರಮುಖರಾದ ಸಿ.ಶೇಖರಪ್ಪ, ಹಳ್ಳಿ ಮಹೇಶ, ದಾನನಗೌಡ, ಸಿ.ಮೈಲಪ್ಪ, ಎಸ್.ಶೇಖರಪ್ಪ, ದಿದ್ಗಿ ನಾಗರಾಜ್ ಮತ್ತಿತರರು ಇದ್ದರು. ಈ ಮೊದಲು ಜ್ಯೋತಿ ಅವರ ಅತ್ತೆ ದಿದ್ಗಿ ಅಂಜಿನಮ್ಮ ಜಗನ್ನಾಥ್ ಅಧ್ಯಕ್ಷರಾಗಿದ್ದರು. ಅಂಜಿನಮ್ಮ ಕಳೆದ ಅಕ್ಟೋಬರ್‌ನಲ್ಲಿ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ದಿದ್ಗಿ ಜ್ಯೋತಿ ನಾಗರಾಜ್ ಆಯ್ಕೆಯಾಗಿದ್ದರು.