ಹಗರಿಬೊಮ್ಮನಹಳ್ಳಿ: ಶ್ವಾಸಕೋಶ, ಉಸಿರಾಟದ ತೊಂದರೆ, ಅಸ್ತಮಾ, ಕೆಮ್ಮು, ಅಲರ್ಜಿ, ಹೃದಯನಾಳ ಶುದ್ಧತೆಗೆ ಸಂಬಂದಿಸಿದಂತೆ ಹಲವು ಬಗೆಯ ಕಾಯಿಲೆಗಳಿಗೆ ಸಿದ್ದ ಔಷಧ ರಾಮಬಾಣವಾಗಿದೆ ಎಂದು ನಂದಿಪುರದ ಡಾ.ಮಹೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ನಂದಿಪುರ ಸೌಹಾರ್ದ ಸಹಕಾರ ಬ್ಯಾಂಕ್, ಬಸವೇಶ್ವರ ಫೌಂಡೇಶನ್, ಪತ್ರಿ ಬಸವೇಶ್ವರ ಸೇವಾ ಸಮಿತಿ ಜಂಟಿಯಾಗಿ ಶನಿವಾರ ಏರ್ಪಡಿಸಿದ್ದ ಉಚಿತ ಸಿದ್ಧ ವೈದ್ಯ ಔಷಧಿ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಅವರು ಆರ್ಯವೇದ, ಹೊಮಿಯೋಪತಿಯಿಂದ ಕೂಡಿದ ಸಿದ್ಧ ಔಷಧ ಶಿಬಿರವನ್ನು ಈಗಾಗಲೇ ಎರಡು ಬಾರಿ ಆಯೋಜಿಸಲಾಗಿದೆ. ಚಿಕಿತ್ಸೆ ಪಡೆದುಕೊಂಡ ಜನರಲ್ಲಿ ಆರೋಗ್ಯ ಸುಧಾರಣೆ ಕಂಡಿದೆ ಎಂದರು.
ಸಿದ್ಧ ಔಷಧಿ ವೈದ್ಯ ವಿಜಯಕುಮಾರ ಮಾತನಾಡಿ, ಔಷಧದಲ್ಲಿ ಕೆಮಿಕಲ್ ಇರುವುದಿಲ್ಲ. ಐದು ವರ್ಷದ ಮಕ್ಕಳಿಂದ ಎಲ್ಲ ವಯಸ್ಸಿನವರು ಸಿದ್ದ ಔಷಧಯನ್ನು ತೆಗೆದುಕೊಳ್ಳಬಹುದು. ಯಾವುದೇ ದೀರ್ಘಾವಧಿ ಕಾಯಿಲೆಗಳಿದ್ದರೂ ವಾಸಿಯಾಗಿರುವ ನಿದರ್ಶನಗಳಿವೆ. ಮೂರು ದಿನಗಳ ಕಾಲ ಔಷಧವನ್ನು ಮೂಗಿನ ಮೂಲಕ ನೀಡಲಾಗುತ್ತದೆ ಎಂದರು.
ಡಾ. ಸತ್ಯಂಸಿಂಗ್ , ಗಂಗಾಮತ ಸಮುದಾಯದ ವಿಜಯನಗರ ಜಿಲ್ಲಾ ಅಧ್ಯಕ್ಷ ಅಂಬಾಡಿ ನಾಗರಾಜ, ಜೆಡಿಎಸ್ ಮುಖಂಡ ಬನ್ನಿಗೋಳ ವೆಂಕಣ್ಣ, ಸೊನ್ನದ ಗುರುಬಸವರಾಜ, ಬಂಡಿಹಳ್ಳಿ ಮಂಜುನಾಥ, ನೆಲ್ಕುದ್ರಿ ಪತ್ರೇಶ್, ಎಂ.ಗುರು, ವಿಶ್ವನಾಥ, ನಿವೃತ್ತ ಶಿಕ್ಷಕ ಕೆ.ಕೊಟ್ರೇಶಪ್ಪ, ಅರ್ಚಕ ಬಿ.ಎಂ.ಕೊಟ್ರಯ್ಯ, ಕರಿಬಸವನಗೌಡ ಇದ್ದರು.