ಹಗರಿಬೊಮ್ಮನಹಳ್ಳಿ: ಇಲ್ಲಿಯ ಕೆಎಸ್‌ಆರ್‌ಟಿಸಿ ಡಿಪೋದ ಹೊರಗುತ್ತಿಗೆ ನೌಕರರ ಮಾರುತಿ ಐದು ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಬ್ಯಾಗ್‌ನ್ನು ವಾರಸುದಾರರಾದ ಮೈಮ್‌ಉನ್ನೀಸಾ ಬೇಗಂ ಅವರಿಗೆ ಸೋಮವಾರ ಮರಳಿಸಿ ಪ್ರಮಾಣಿಕತೆ ಮರೆದಿದ್ದಾರೆ.
ಭಾನುವಾರ ರಾತ್ರಿ ಬಸ್‌ಗಳನ್ನು ಸ್ವಚ್ಛಗೊಳಿಸುವಾಗ ಮಾರುತಿಗೆ ಪ್ರಯಾಣಿಕರ ಚಿನ್ನಾಭರಣದ ಬ್ಯಾಗ್ ಸಿಕ್ಕಿದೆ. ಅದನ್ನು ಘಟಕದ ಅಧಿಕಾರಿ ಸಂಚಾರ ನಿರೀಕ್ಷಕ ಸಂತೋಷ್‌ನಾಯ್ಕ ಅವರಿಗೆ ನೀಡಿದ್ದಾರೆ. ಅಧಿಕಾರಿಗಳು ಬ್ಯಾಗ್‌ನ್ನು ಪರಿಶೀಲಿಸಿದಾಗ ಐಡಿಕಾರ್ಡ್, ಸುಮಾರು 4 ಲಕ್ಷ ರೂ.ಬೆಲೆಬಾಳುವ ಚಿನ್ನಾಭರಣ ಆಭರಣಗಳು ಹಾಗೂ 500 ರೂ. ಕಂಡು ಬಂದಿದೆ. ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.