ಹಂಪಾಪಟ್ಟಣ ಗ್ರಾಮದಲ್ಲಿ ಜನಸೇವಾ ಟ್ರಸ್ಟ್‌ನಿಂದ ಉಚಿತ ನೋಟ್‌ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಟ್ರಸ್ಟ್ ಅಧ್ಯಕ್ಷ ಬುಡ್ಡಿಬಸವರಾಜ, ಉಪಾಧ್ಯಕ್ಷ ಎಸ್.ಎನ್.ಭಜಂತ್ರಿ, ತಾಪಂ ಮಾಜಿ ಸದಸ್ಯ ಅನಿಲ್‌ಕುಮಾರ್ ಜಾಣಾ ಇತರರಿದ್ದರು. 
ಜಿಲ್ಲೆ

ಉನ್ನತ ಹುದ್ದೆ ಪಡೆದು ಹೆತ್ತವರಿಗೆ ಕೀರ್ತಿ ತನ್ನಿ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದು ಜನಸೇವಾ ಟ್ರಸ್ ಅಧ್ಯಕ್ಷ ಬುಡ್ಡಿ ಬಸವರಾಜ ಹೇಳಿದರು.

ಹಂಪಾಪಟ್ಟಣ ಗ್ರಾಮದಲ್ಲಿ ಜನಸೇವಾ ಟ್ರಸ್ಟ್ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯೆ ಎಂಬುದು ಯಾರೂ ಕದಿಯಲಾರದ ವಸ್ತು. ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದು ಹೆತ್ತವರು ಮತ್ತು ಗ್ರಾಮಕ್ಕೂ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ತಾಪಂ ಮಾಜಿ ಸದಸ್ಯ ಅನಿಲ್‌ಕುಮಾರ್ ಜಾಣಾ ಮಾತನಾಡಿದರು.

ಗ್ರಾಮದ ಎಸ್ಸೆಸ್ಸೆಲ್ಸಿ , ಪಿಯುಸಿ, ಪದವಿಯ 240 ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಪ್ರತಿಭಾವಂತ 6 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಂಘಟನೆಯ ಉಪಾಧ್ಯಕ್ಷ ಎಸ್.ಎನ್.ಭಜಂತ್ರಿ, ಗ್ರಾಪಂ ಅಧ್ಯಕ್ಷ ಬಿ.ನಾಗರಾಜ, ಪ್ರಮುಖರಾದ ಕನ್ನಿಹಳ್ಳಿ ಚಂದ್ರಶೇಖರ, ಎಂ.ಶಿವರಾಜ, ಕಿಟಕಿ ರಾಮಣ್ಣ, ಕಾನಿಪ ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್, ಸಿ.ಶಿವಾನಂದ, ಸಿ.ಎಲ್.ಕುಮಾರ್, ಎನ್.ನಾಗರಾಜ, ಮಂಜುನಾಥ, ಸಿದ್ದರ ಗಾಳೆಪ್ಪ, ಅಂಜಿನಪ್ಪ, ಕೊರವರ ಸೋಮಣ್ಣ, ಜಿ.ಶ್ರೀನಿವಾಸ ಶೆಟ್ಟಿ ಇತರರಿದ್ದರು.