ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಸಾಗರ ಮಹಾದೇವ ತಾತನ ಮಠದಲ್ಲಿ ಪಲ್ಲಕ್ಕಿ ಮೆರವಣಿಗೆ ಜರುಗಿತು.  
ಜಿಲ್ಲೆ

ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ

ಶಾಮಸುಂದರ್ ಕೊಪ್ಪಳಕರ್

ಹಗರಿಬೊಮ್ಮನಹಳ್ಳಿ: ನಾಗರ ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೂಕಿನ ದೇವಸ್ಥಾನ, ಮಠಗಳಲ್ಲಿ ಗುರುವಾರ ವಿಶೇಷ ಪೂಜೆಗಳು ಜರುಗಿದವು.

ಪಟ್ಟಣದ ಶ್ರೀ ಹಾಲಸ್ವಾಮಿ ಮಠದಲ್ಲಿ ಹಾಲಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶ್ರೀ ಹಾಲಸ್ವಾಮಿ ಮೂರ್ತಿಗೆ ಅಭಿಷೇಕ ಮತ್ತು ಪೂಜೆ ನಡೆಯಿತು. ನಂದಿಪುರದ ದೊಡ್ಡ ಬಸವೇಶ್ವರ ಸ್ವಾಮಿ ಗದ್ದುಗೆಗೆ ಡಾ.ಮಹೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ ಕೈಗೊಳ್ಳಲಾಯಿತು. ಬಾಚಿಗೊಂಡನಹಳ್ಳಿಯ ಗಾಯತ್ರಿ ದೇಗುಲದಲ್ಲಿ ಪೂಜೆ, ಹಂಪಸಾಗರದ ಮಹಾದೇವ ತಾತನ ಮಠದಲ್ಲಿ ಬೆಳಗ್ಗೆ ಮೂರ್ತಿಗೆ ಅಭಿಷೇಕ, ವಿವಿಧ ಹೂಗಳಿಂದ ಅಲಂಕಾರ, ಪಲ್ಲಕ್ಕಿ ಉತ್ಸವ ನೆರವೇರಿತು. ಇದಕ್ಕೂ ಮುನ್ನ ಶ್ರಿ ರುದ್ರಮುನಿ ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿದರು.