ಹಗರಿಬೊಮ್ಮನಹಳ್ಳಿ ತಾಲೂಕಿನ ಗುಳೇದಾಳು ಕೆರೆ ಹೂಳೆತ್ತುವ ಕಾಮಗಾರಿಯನ್ನು ಜಿಪಂ ಸಿಇಒ ಸದಾಶಿವ ಪ್ರಭು ಪರಿಶೀಲಿಸಿ ಕೂಲಿ ಕಾರ್ಮಿಕರೊಂದಿಗೆ ಚರ್ಚಿಸಿದರು. ತಾಲೂಕು ಪಂಚಾಯಿತಿ ಇಒ ಜಿ.ಪರಮೇಶ್ವರ, ನರೇಗಾ ಎಡಿ ರಮೇಶ್ ಮಹಾಲಿಂಗಾಪುರ ಇದ್ದರು. 
ಜಿಲ್ಲೆ

ಕೆರೆ ಕಾಮಗಾರಿ ವೀಕ್ಷಿಸಿದ ಜಿಪಂ ಸಿಇಒ

ಹಗರಿಬೊಮ್ಮನಹಳ್ಳಿ: ತಾಲೂಕಿನ ಹಲಗಾಪುರ ಗ್ರಾಪಂ ವ್ಯಾಪ್ತಿಯ ಗುಳೇದಾಳು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕೆರೆ ಹೂಳೆತ್ತುವ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಶನಿವಾರ ಭೇಟಿ ನೀಡಿ ವೀಕ್ಷಿಸಿದರು.

ರಾಯರಾಳು ತಾಂಡಾದ ಅಮೃತ ಸರೋವರ ಕಾಮಗಾರಿ ಸ್ಥಳಕ್ಕೂ ತೆರಳಿ ಪರಿಶೀಲಿಸಿ ಕೂಲಿ ಕಾರ್ಮಿಕರೊಂದಿಗೆ ಚರ್ಚಿಸಿದರು. ಎನ್‌ಎಂಎಂಎಸ್ ಹಾಜರಾತಿ ಬಗ್ಗೆ ಪರಿಶೀಲನೆ ನಡೆಸಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಿದ ರಾಯರಾಳು ತಾಂಡಾ ಹೊಸಕೆರೆ ನಿನ್ನೆ ಸುರಿದ ಮಳೆಯಿಂದ ಭರ್ತಿಯಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.

ತಾಪಂ ಇಒ ಜಿ.ಪರಮೇಶ್ವರ, ನರೇಗಾ ಯೋಜನೆ ಎಡಿ ರಮೇಶ್ ಮಹಾಲಿಂಗಾಪುರ, ತಾಂತ್ರಿಕ ಸಂಯೋಜಕ ವಿಷ್ಣುನಾಯ್ಕ, ಜಿಪಂನ ಮಂಜುನಾಥ ಸುಣಗಾರ ಇದ್ದರು.