ಹಗರಿಬೊಮ್ಮನಹಳ್ಳಿ: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ವಿಕಾಸ್ ಲಮಾಣಿ ಹೇಳಿದರು.
ಗಣೇಶ ಹಾಗೂ ಈದ್‌ಮಿಲಾದ್ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗಣೇಶನನ್ನು ಕೂಡಿಸುವ ಮಂಡಳಿಯವರು ಪೊಲೀಸ್ ಠಾಣೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಅದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಬೇಕು. ವಿವಿಧೆಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ರಾತ್ರಿ 10 ಗಂಟೆಯೊಳಗೆ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಆರ್.ಕವಿತಾ, ಎಎಸ್ಪಿ ಸಲೀಂ ಪಾಷಾ, ಡಿವೈಎಸ್ಪಿ ಪಿ.ಮಲ್ಲಪ್ಪ, ಪಿಎಸ್‌ಐ ಬಸವರಾಜ ಅಡವಿಬಾವಿ, ಸಿಬ್ಬಂದಿ ಮಲ್ಲೇಶ್ ನಾಯ್ಕ, ದಶರಥ, ತಾಲೂಕು ವೈದ್ಯಾಧಿಕಾರಿ ಪ್ರವೀಣ್, ಜೆಸ್ಕಾಂ ಇಂಜಿನಿಯರ್ ಸಚಿನ್, ಅಗ್ನಿಶಾಮಕ ಠಾಣೆಯ ವಾಸುದೇವ, ಪುರಸಭೆಯ ನಾಗರತ್ನಾ, ತಾಪಂ ನರೇಗಾ ಎಡಿ ರಮೇಶ್ ಮಹಾಲಿಂಗಾಪುರ, ಅರಣ್ಯ ಇಲಾಖೆಯ ಕರಿಬಸಪ್ಪ, ಪ್ರಮುಖರಾದ ಮುಟುಗನಹಳ್ಳಿ ಕೊಟ್ರೇಶ್, ಕಿನ್ನಾಳ್ ಸುಭಾಷ್, ಕನ್ನಿಹಳ್ಳಿ ಚಂದ್ರಶೇಖರ, ಬುಡ್ಡಿ ಬಸವರಾಜ, ಹುಳ್ಳಿ ಪ್ರಕಾಶ್ ಇತರರಿದ್ದರು.