ಹಗರಿಬೊಮ್ಮನಹಳ್ಳಿ ತಾಲೂಕಿನ ಬ್ಯಾಸಗಿದೇರಿ ಗ್ರಾಪಂ ಆವರಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ನಡೆಯಿತು. ಗ್ರಾಪಂ ಅಧ್ಯಕ್ಷೆ ಮುದೇಗೌಡರ ಕರಿಬಸಮ್ಮ ಉಮೇಶ, ಸದಸ್ಯರಾದ ಎಚ್.ಭಾಗ್ಯಮ್ಮ, ಇಟ್ಟಿಗಿ ಗುರುಬಸವರಾಜ, ಪ್ರಮುಖರಾದ ಸಿ.ಬಿ.ಬಸವರಾಜ, ಹೊಸಮನಿ ಕರಿಬಸಪ್ಪ, ಪುತ್ರೇಶ, ಸಂಗಮೇಶ ಇತರರಿದ್ದರು. 
ಜಿಲ್ಲೆ

ನರೇಗಾದಡಿ ಸೌಲಭ್ಯ ಪಡೆಯಿರಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ಬ್ಯಾಸಗಿದೇರಿ ಗ್ರಾಪಂ ಆವರಣದಲ್ಲಿ 2024-25ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಸಾಮಾಜಿಕ ಪರಿಶೋಧನೆಯ ಗ್ರಾಮಸಭೆ ಸೋಮವಾರ ನಡೆಯಿತು.

ನೋಡಲ್ ಅಧಿಕಾರಿ ಬೋರೆಗೌಡ ಮಾತನಾಡಿ, ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳಲ್ಲಿ ದನದ ಕೊಟ್ಟಿಗೆ, ಇಂಗುಗುಂಡಿ ನಿರ್ಮಾಣದೊಂದಿಗೆ ತೋಟಗಾರಿಕೆ, ರೇಷ್ಮೆ ಇಲಾಖೆಯ ಸೌಲಭ್ಯಗಳನ್ನು ಪಡೆಯಬಹುದು ಎಂದರು.

ನರೇಗಾ ಯೋಜನೆ ಸಂಪನ್ಮೂಲ ವ್ಯಕ್ತಿ ಪೂಜಾರ್ ಸಿದ್ದಪ್ಪ ಮಾತನಾಡಿ, 15ನೇ ಹಣಕಾಸು ಯೋಜನೆಯಡಿ ಸಾರ್ವಜನಿಕರು, ಉದ್ಯೋಗ ಖಾತ್ರಿ ಜಾಬ್ ಕಾರ್ಡ್‌ದಾರರು ಗ್ರಾಪಂ ಮೂಲಕ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.

ತಾಂತ್ರಿಕ ಅಧಿಕಾರಿಗಳಾದ ಶಿವಕುಮಾರ, ನಾಗಭೂಷಣ, ಬಿಎಫ್‌ಟಿ ದೊಡ್ಡಬಸಪ್ಪ, ಕಾಯಕಮಿತ್ರ ಶಬೀನಾ, ಸಂಪನ್ಮೂಲ ವ್ಯಕ್ತಿಗಳಾದ ವಾಲಿ ವೀರೇಶ, ಯು.ಎಸ್.ಚೈತ್ರಾ, ಭದ್ರಮ್ಮ ಇತರರಿದ್ದರು.