ಹಗರಿಬೊಮ್ಮನಹಳ್ಳಿಯಲ್ಲಿ ಉಪತಹಸೀಲ್ದಾರ್ ಶಿಲ್ಪಾಗೆ ರಾಜ್ಯ ಗ್ರಾಪಂಗಳ ಸದಸ್ಯರ ಒಕ್ಕೂಟದ ತಾಲೂಕು ಘಟಕ ಮನವಿ ಸಲ್ಲಿಸಿತು. ಅಧ್ಯಕ್ಷೆ ಟಿ.ಮಮತಾ, ಗೌರವಾಧ್ಯಕ್ಷ ರಾಮರೆಡ್ಡಿ, ಲಕ್ಷ್ಮೀದೇವಿ, ಮೆಹಬೂಬ್‌ಸಾಬ್, ಪೂರ್ಣಿಮಾ, ಬಸಮ್ಮ ಇತರರಿದ್ದರು. 
ಜಿಲ್ಲೆ

ನಿರ್ಣಯ ಹಕ್ಕು ಮೊಟಕುಗೊಳಿಸದಿರಿ

ನರೇಶ್ ಕುಮಾರ್

ಹಗರಿಬೊಮ್ಮನಹಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಗ್ರಾಪಂಗಳ ಸದಸ್ಯರ ಒಕ್ಕೂಟದ ತಾಲೂಕು ಘಟಕ ಸೋಮವಾರ ಉಪತಹಸೀಲ್ದಾರ್ ಶಿಲ್ಪಾ ಹಾಗೂ ಶಾಸಕ ಕೆ.ನೇಮಿರಾಜ್ ನಾಯ್ಕಗೆ ಮನವಿ ಸಲ್ಲಿಸಿತು.

ಒಕ್ಕೂಟದ ಅಧ್ಯಕ್ಷೆ ಮಮತಾ ತಳವಾರ್ ಮಾತನಾಡಿ, ಗ್ರಾಮ ಸ್ವರಾಜ್ ಎಂದರೆ ಸ್ಥಳೀಯ ಸಂಸ್ಥೆಗಳು ಗ್ರಾಮಾಭಿವೃದ್ಧಿಗೆ ಅನುದಾನ ನೀಡಬೇಕು. ಸದಸ್ಯರು ನಿರ್ಣಯ ಕೈಗೊಳ್ಳುವ ಹಕ್ಕು ಮೊಟಕುಗೊಳಿಸಬಾರದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು.

ಒಂದು ವೇಳೆ ಸರ್ಕಾರ ನಿರ್ಲಕ್ಷ್ಯ ವಹಿಸಿದರೆ ಅ.2ರಂದು ರಾಜ್ಯದ ಎಲ್ಲ ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಒಕ್ಕೂಟದ ಗೌರವಾಧ್ಯಕ್ಷ ರಾಮರೆಡ್ಡಿ, ಪದಾಧಿಕಾರಿಗಳಾದ ಲಕ್ಷ್ಮೀದೇವಿ, ಮೆಹಬೂಬ್ ಸಾಬ್, ಪೂರ್ಣಿಮಾ, ಬಸಮ್ಮ, ತಳವಾರ ಹನುಮೇಶ ಹಾಗೂ ಮುಖಂಡರಾದ ನಾಗರಾಜ್, ಖಾಜಾಸಾಬ್, ಪ್ರಕಾಶ್ ನಾಯ್ಕ ಇತರರಿದ್ದರು.