ಹಗರಿಬೊಮ್ಮನಹಳ್ಳಿ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಸುನಿಲ್ ನಾಯ್ಕಗೆ ಬೆಳೆ ಸಮೀಕ್ಷೆದಾರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ನವೀನ್ ಕುಮಾರ, ಪದಾಧಿಕಾರಿಗಳಾದ ಎಚ್.ಅಜ್ಜಪ್ಪ, ಕೆ.ನಾಗರಾಜ, ಎಸ್.ರಾಘವೇಂದ್ರ, ಮಹಾದೇವಯ್ಯ ಮತ್ತಿತರರು ಇದ್ದರು. 
ಜಿಲ್ಲೆ

ಸೇವಾಭದ್ರತೆ, ಗುರುತಿನ ಚೀಟಿ ಒದಗಿಸಿ

ಹಗರಿಬೊಮ್ಮನಹಳ್ಳಿ: ಸೇವಾಭದ್ರತೆ ಹಾಗೂ ಜೀವವಿಮೆ ಒದಗಿಸುವಂತೆ ಆಗ್ರಹಿಸಿ ಕೃಷಿ ಇಲಾಖೆ ಸಹಾಯಕ ಅಧಿಕಾರಿ ಸುನಿಲ್ ನಾಯ್ಕಗೆ ಬೆಳೆ ಸಮೀಕ್ಷೆದಾರರ ತಾಲೂಕು ಸಮಿತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಅಧ್ಯಕ್ಷ ನವೀನ್ ಕುಮಾರ ಮಾತನಾಡಿ, ನಾವು ಹತ್ತು ವರ್ಷಗಳಿಂದ ಬೆಳೆ ಸಮೀಕ್ಷೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಹೊಲಗಳಲ್ಲಿ ಕಾರ್ಯನಿರ್ವಹಿಸುವಾಗ ವಿಷ ಜಂತುಗಳು, ಕಾಡುಹಂದಿ, ತೋಳಗಳ ದಾಳಿ ನಡೆಸುತ್ತವೆ. ಇದರಿಂದ ಜೀವ ಭಯದಲ್ಲೇ ಕಾರ್ಯನಿರ್ವಹಿಸಬೇಕಾಗಿದೆ.

ಆದ್ದರಿಂದ ನಮಗೆ ಜೀವವಿಮೆ ಅವಶ್ಯವಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ನಮ್ಮ ಸೇವೆಯನ್ನು ಕಾಯಂಗೊಳಿಸಬೇಕು. ಗುರುತಿನ ಚೀಟಿ ಒದಗಿಸಬೇಕು. ಇದರಿಂದ ಸೇವಾ ಭದ್ರತೆ ದೊರೆಯುತ್ತದೆ ಎಂದರು.