ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಕ್ಕಸೊಬಟಿ ಗ್ರಾಮದಲ್ಲಿ ಮದ್ಯದ ಅಕ್ರಮ ಮಾರಾಟ ತಡೆಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪಿಎಸ್‌ಐ ಬಸವರಾಜ ಅಡವಿಬಾವಿಗೆ ಮನವಿ ಸಲ್ಲಿಸಿದರು. ಗ್ರಾ.ಪಂ. ಸದಸ್ಯರಾದ ವೀರಯ್ಯ, ಸಿ.ಆನಂದ, ತಾ.ಪಂ.ಮಾಜಿ ಸದಸ್ಯ ಮಂಜುನಾಥ, ಗ್ರಾಮಸ್ಥರಾದ ಟಿ.ಜಯಪ್ಪ, ಎನ್.ನಿಂಗಪ್ಪ, ಮಹಿಳೆಯರು ಇದ್ದರು. 
ಜಿಲ್ಲೆ

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಹಗರಿಬೊಮ್ಮನಹಳ್ಳಿ: ತಾಲೂಕಿನ ಚಿಕ್ಕಸೊಬಟಿಯಲ್ಲಿ ಮದ್ಯದ ಅಕ್ರಮ ಮಾರಾಟ ತಡೆಗಟ್ಟಬೇಕು ಎಂದು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಿಗೆ ಗ್ರಾಮಸ್ಥರು ಶುಕ್ರವಾರ ಮನವಿ ಸಲ್ಲಿಸಿದರು.

ಗ್ರಾಮದ ಗೂಡಂಗಡಿಗಳಲ್ಲಿ ಐದಾರು ವರ್ಷಗಳಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಕೂಲಿ ಕಾರ್ಮಿಕರು ಹಾಗೂ ಅಪ್ರಾಪ್ತರು ಕುಡಿತಕ್ಕೆ ದಾಸರಾಗುತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿಕೊಂಡರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ಗ್ರಾ.ಪಂ. ಸದಸ್ಯರಾದ ಸಿ.ಆನಂದ, ವೀರಯ್ಯ, ತಾ.ಪಂ.ಮಾಜಿ ಸದಸ್ಯ ಮಂಜುನಾಥ, ಗ್ರಾಮಸ್ಥರಾದ ಟಿ.ಜಯಪ್ಪ, ಗೌಡ್ರು ಸಿದ್ದರಾಮಪ್ಪ, ಎನ್.ನಿಂಗಪ್ಪ, ಎನ್.ರಾಮಾಂಜನಿ, ಬಿ.ಮಂಜುನಾಥ, ಕೆ.ನಾಗರಾಜಪ್ಪ, ಪುತ್ರೇಶ, ನವಲಿ ನಾಗರಾಜ, ಎಚ್.ಯಲ್ಲಮ್ಮ, ಎಸ್.ಗಂಗಮ್ಮ, ಹುಲಿಗೆಮ್ಮ, ಎನ್.ಯಶೋದಾ ಇತರರಿದ್ದರು.