ಹಗರಿಬೊಮ್ಮನಹಳ್ಳಿ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾ.15ಕ್ಕೆ ಪಟ್ಟಣಕ್ಕೆ ಆಗಮಿಸಲಿದೆ ಎಂದು ಪಕ್ಷದ ಮಂಡಲ ಅಧ್ಯಕ್ಷ ಎಸ್.ವೀರೇಶ್ವರಸ್ವಾಮಿ ಹೇಳಿದರು.
ಗಂಗಾವತಿ ಭೀಮಪ್ಪನವರ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಸೊಮವಾರ ಮಾತನಾಡಿದರು. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 40 ರಿಂದ 50 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಇವರಿಗೆ ಆಸನ, ಊಟ, ವಾಹನಗಳ ಪಾರ್ಕಿಂಗ್, ಕುಡಿಯುವ ನೀರು ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪಕ್ಷದ ಎಲ್ಲ ಆಕಾಂಕ್ಷಿಗಳು ಒಗ್ಗಟಾಗಿ ಮಾಜಿ ಶಾಸಕ ಕೆ.ನೇಮಿರಾಜನಾಯ್ಕ ನೇತೃತ್ವದಲ್ಲಿ ಯಾತ್ರೆಗೆ ಕೈಜೋಡಿಸಿದ್ದಾರೆ. ಈ ಯಾತ್ರೆ ಕಾರ್ಯಕರ್ತರಿಗೆ ನವ ಚೈತನ್ಯ ಮೂಡಿಸಲಿದೆ. ಕ್ಷೇತ್ರದಲ್ಲಿ ಪಕ್ಷವು ಬೂತ್‌ಮಟ್ಟದಲ್ಲಿ ಶಕ್ತಿಯುತವಾಗಿದೆ ಎಂದರು.
ತಾಲೂಕಿನ ದಶಮಾಪುರದಲ್ಲಿ ವಿಶೇಷವಾಗಿ ಸ್ವಾಗತಿಸಿ, ಪಟ್ಟಣಕ್ಕೆ ಕರೆ ತರಲಾಗುವುದು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಶಶಿಕಲಾ ಜೊಲ್ಲೆ, ಆನಂದ್‌ಸಿಂಗ್, ಪಕ್ಷದ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಮತ್ತಿತರ ಗಣ್ಯರು ಬಸವೇಶ್ವರ ಮತ್ತು ವಾಲ್ಮೀಕಿ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ವೇದಿಕೆಗೆ ಆಗಮಿಸಲಿದ್ದಾರೆ ಎಂದರು.
ಪೂರ್ವಸಿದ್ಧತಾ ಸಭೆಯಲ್ಲಿ ಪಕ್ಷದ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಕೆ.ನೇಮಿರಾಜನಾಯ್ಕ, ಬಲ್ಲಾಹುಣ್ಸಿ ರಾಮಣ್ಣ, ಕೆ.ಎಚ್.ಮಲ್ಲಿಕಾರ್ಜುನ ನಾಯ್ಕ, ಲಕ್ಷ್ಮೀನಾರಾಯಣ, ಎಚ್.ಬಿ.ಜಯಪ್ರಕಾಶ್, ಕೃಷ್ಣನಾಯ್ಕ ಇತರರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು.
ಯಾತ್ರೆ ಸಂಚಾಲಕ ಜೋಗಿ ಹನುಮಂತ, ಮಂಡಲ ಚುನಾವಣಾ ಉಸ್ತುವಾರಿ ನಂಜನಗೌಡ್ರು, ಮಂಡಲ ಪ್ರಧಾನ ಕಾರ್ಯದರ್ಶಿ ಬ್ಯಾಟಿ ನಾಗರಾಜ, ಪುರಸಭೆ ಸದಸ್ಯರಾದ ದೀಪಕ್ ಕಠಾರೆ, ನಾಗರಾಜ ಜನ್ನು, ಮುಖಂಡರಾದ ಕೆ.ಎಂ.ತಿಪ್ಪೇಸ್ವಾಮಿ, ಭದ್ರವಾಡಿ ಚಂದ್ರಶೇಖರ್, ಕಿನ್ನಾಳ್ ಸುಭಾಷ್, ಸಂದೀಪ್ ಶಿವಮೊಗ್ಗ, ಅಂಬಳಿ ರವೀಂದ್ರಗೌಡ, ಚಿತವಾಡಗಿ ಪ್ರಕಾಶ್ ಇದ್ದರು.