ಹಗರಿಬೊಮ್ಮನಹಳ್ಳಿಯಲ್ಲಿ ಉಪತಹಸೀಲ್ದಾರ್ ಅನ್ನದಾನೇಶ್ವರಗೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಪ್ರಮುಖರಾದ ಎಸ್.ಎಂ.ವೀರೇಶ್ವರ ಸ್ವಾಮಿ, ಬಲ್ಲಾಹುಣ್ಸಿ ರಾಮಣ್ಣ, ಕೆ.ಎಚ್.ಮಲ್ಲಿಕಾರ್ಜುನ ನಾಯ್ಕ, ಭದ್ರವಾಡಿ ಚಂದ್ರಶೇಖರ್ ಇತರರಿದ್ದರು.  
ಜಿಲ್ಲೆ

ಅಭಿವೃದ್ಧಿ ಮರೆತ ಕಾಂಗ್ರೆಸ್ ಸರ್ಕಾರ

ಶಾಮಸುಂದರ್ ಕೊಪ್ಪಳಕರ್

ಹಗರಿಬೊಮ್ಮನಹಳ್ಳಿ: ಕಾಂಗ್ರೆಸ್ ರೈತ ವಿರೋಧಿ ನೀತಿ ಖಂಡಿಸಿ ಬಿಜೆಪಿ ರೈತ ಮೋರ್ಚಾದಿಂದ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಅನ್ನದಾನೇಶ್ವರಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಆರ್ಥಿಕ ದಿವಾಳಿತನ ಸೃಷ್ಟಿಯಾಗಲಿದೆ. ಉಚಿತ ಭಾಗ್ಯಗಳ ನೆಪದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಮರೆತಿದೆ.

ರಾಜಸ್ವ ಹೆಚ್ಚಿಸಿ ಪ್ರಣಾಳಿಕೆಯಲ್ಲಿ ಹೇಳಿದ ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದೆ.

ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಕೃಷಿಕರು ಕಂಗಲಾಗಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಬರದ ಛಾಯೆ ಮೂಡಿದೆ. ಆದರೆ, ಬರ ಘೋಷಣೆಗೆ ಮೀನಮೇಷ ಎಣಿಸುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸದೆ ತೊಂದರೆ ನೀಡುತ್ತಿದೆ ಎಂದು ಮುಖಂಡರು ದೂರಿದರು.

ಪ್ರಮುಖರಾದ ಬಲ್ಲಾಹುಣ್ಸಿ ರಾಮಣ್ಣ, ಭದ್ರವಾಡಿ ಚಂದ್ರಶೇಖರ್, ಬಿಜೆಪಿ ಮಂಡಲ ಅಧ್ಯಕ್ಷ ಎಸ್.ಎಂ.ವೀರೇಶ್ವರ ಸ್ವಾಮಿ, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಎಚ್.ಮಲ್ಲಿಕಾರ್ಜುನ ನಾಯ್ಕ, ರೈತ ಮೋರ್ಚಾ ಅಧ್ಯಕ್ಷ ಜಿ.ಚನ್ನೇಶ್,

ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ಬುಡ್ಡಿ ಬಸವರಾಜ್, ಪುರಸಭೆ ಸದಸ್ಯ ಜೋಗಿ ಹನುಮಂತ, ಪುರಸಭೆ ಸದಸ್ಯ ಕೆ.ಎಂ.ನವೀನ್, ಮಾಜಿ ಸದಸ್ಯ ಕನಕಪ್ಪ, ನರೇಗಲ್ ಮಲ್ಲಿಕಾರ್ಜುನ,

ದಿವಾಕರ್‌ಗೌಡ, ಹಂಪಾಪಟ್ಟಣ ಮಹೇಂದ್ರ, ಕರಿಬಸಪ್ಪ, ಹನಿ ಮಂಜುನಾಥ್, ವೆಂಕಟೇಶ ಉಪ್ಪಾರ್, ಎ.ಕೆ.ರಾಮಣ್ಣ, ಮಂಜುನಾಥ ಇತರರಿದ್ದರು.