ಜಿಲ್ಲೆ

ಹಗರಿಬೊಮ್ಮನಹಳ್ಳಿ ಬಂದ್, ಬೃಹತ್ ಪ್ರತಿಭಟನೆ

ಹಗರಿಬೊಮ್ಮನಹಳ್ಳಿ (ಬಳ್ಳಾರಿ): ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ ಅವರ ವರ್ತನೆ ಖಂಡಿಸಿ ಬಿಜೆಪಿಯಿಂದ ಕರೆ ನೀಡಲಾಗಿರುವ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದಲ್ಲಿ ಅಂಗಡಿ, ಮುಂಗಟ್ಟುಗಳು ಮುಚ್ಚಿವೆ. ವಾಲ್ಮೀಕಿ ಪುತ್ಥಳಿಗೆ ಮಾಲೆ ಹಾಕುವ ಮೂಲಕ ಮಾಜಿ ಶಾಸಕ ನೇಮಿರಾಜ ನಾಯ್ಕ ಪ್ರತಿಭಟನೆಗೆ ಚಾಲನೆ ನೀಡಿದರು. ಬಸವೇಶ್ವರ ರಸ್ತೆಯಲ್ಲಿ ಬಿಜೆಪಿ ಮೆರವಣಿಗೆ ಸಾಗುವ ವೇಳೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಕೆಲ ಅಂಗಡಿ ಮಾಲೀಕರು ಮೆರವಣಿಗೆ ಮುಗಿದ ಬಳಿಕ ಅಂಗಡಿ ತೆರೆಯುವುದಾಗಿ ಪ್ರತಿಕ್ರಿಯಿಸಿದರು.