ಜಿಲ್ಲೆ

ಹಡಪದ ಅಪ್ಪಣ್ಣ ಸಮಗ್ರ ವಚನ ಸಾಹಿತ್ಯದ ಕಣಜ: ಎಂ.ರಾಮಚಂದ್ರ

ಚಾಮರಾಜನಗರ: ಹಡಪದ ಅಪ್ಪಣ್ಣ ಅವರು 12 ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದು, ಸಮಗ್ರ ವಚನ ಸಾಹಿತ್ಯದ ಕಣಜವಾಗಿದ್ದರು ಎಂದು ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.

ನಗರದ ರಾಮಸಮುದ್ರದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವವರು ಬಸವಣ್ಣನವರ ಬಲಗೈ ಬಂಟನೆಂದೇ ಹೆಸರು ಪಡೆದಿದ್ದರು. ಅವರು ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿದ್ದು, ಅವರು ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ "ಅನುಭವ ಮಂಟಪದಲ್ಲಿ" ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿ, ಬಸವಣ್ಣನವರಿಗೆ ಯಾವುದೇ ರೀತಿಯ ಮುಜುಗುರವಾಗದಂತೆ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರ ಕಾರ್ಯಕ್ಷಮತೆಗೆ ಇಂದಿನವರಿಗೆ ಕನ್ನಡಿಯಾಗಿದೆಯೆಂದರೆ ತಪ್ಪಾಗಲಾರದು ಎಂದರು.

ಕಾರ್ಯಕ್ರಮದಲ್ಲಿ  ನಗರಸಭಾ ಸದಸ್ಯ ರಾಮಸಮುದ್ರ ಸುರೇಶ್, ಸವಿತಾ ಸಮಾಜದ  ಜಿಲ್ಲಾಧ್ಯಕ್ಷ ಚಿನ್ನಸ್ವಾಮಿ, ತಾಲೂಕು ಅಧ್ಯಕ್ಷ ಬಸವಣ್ಣ, ಮುಖಂಡರಾದ ರಂಗಸ್ವಾಮಿ, ಶ್ರೀ ನಿವಾಸ್ ,ನರಸಿಂಹ ಶೆಟ್ಟಿ, ಪಿಟೀಲು ಮಹದೇವ, ಮಧು ,ದೇವರಾಜು  ಆರ್.ಡಿ. ಮಹೇಶ್ ,ದೇವಮ್ಮ ಗೋವಿಂದರಾಜು   ಕೊರಿಯರ್ ಮಹದೇವ ಸ್ವಾಮಿ , ವೆಂಕಟೇಶ್ಇ ತರರು ಹಾಜರಿದ್ದರು.