ಜಿಲ್ಲೆ

ಹಡಪದ ಅಪ್ಪಣ್ಣ ಯುವಕ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

Kopala - Raveendra V K

ಕೊಪ್ಪಳ: ನಗರದ ಹಡಪದ ಅಪ್ಪಣ್ಣ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಹಡಪದ ಸಮುದಾಯ ಸಭೆ ನಡೆದಿದ್ದು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ತಾಲೂಕು ಹಡಪದ ಯುವಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಬಸವರಾಜ ಹುಣಸಿಹಾಳ ಅವಿರೋಧವಾಗಿ ಆಯ್ಕೆಯಾದರು. ಲಿಂಗರಾಜ ಹಾಲಳ್ಳಿ (ಉಪಾಧ್ಯಕ್ಷ), ಮಲ್ಲಪ್ಪ ಚಟ್ನಳ್ಳಿ (ಕಾರ್ಯದರ್ಶಿ), ಮಹೇಶ ನಿಂಗಪ್ಪ ಮಸ್ಕಿ (ಖಜಾಂಚಿ), ಪ್ರಕಾಶ ಕಾಟ್ರಳ್ಳಿ (ಸಂಟನಾ ಕಾರ್ಯದರ್ಶಿ), ಜಗದೀಶ ಮುದ್ದಾಬಳ್ಳಿ, ಮುತ್ತಪ್ಪ ಮಿಟ್ಟಿಕೇರಿ, ಶ್ರೀಕಾಂತ ದದೇಗಲ್​, ಮಾರುತಿ ಮುದ್ದಾಬಳ್ಳಿ, ಗುಡದಪ್ಪ ಗೊಂಡಬಾಳ, ಮಂಜುನಾಥ ನರೇಗಲ್​ ಸದಸ್ಯರಾಗಿ ಆಯ್ಕೆಯಾದರು. ಮುಖಂಡರಾದ ಈಶಪ್ಪ ಮುದ್ದಾಬಳ್ಳಿ, ಈರಣ್ಣ ದದೇಗಲ್​, ರಮೇಶ ಚಟ್ನಾಳ, ಗವಿಸಿದ್ದಪ್ಪ ಕಾಟ್ರಳ್ಳಿ, ಶರಣಪ್ಪ ಹಲಗೇರಿ, ಷಣ್ಮುಖಪ್ಪ ಕೋಳೂರು, ಗವಿಸಿದ್ದಪ್ಪ ದದೇಗಲ್​ ಇತರರಿದ್ದರು.