ನರಗುಂದ: ಹನ್ನೆರಡನೇ ಶತಮಾನದಲ್ಲಿ ನಡೆಯುತ್ತಿದ್ದ ಹಲವಾರು ಶೋಷಣೆಗಳನ್ನು ವಿರೋಧಿಸಿ ಹೊಸ ಸಮಾಜದ ಸ್ಥಾಪನೆಗೆ ಹಗಲಿರುಳು ಹೋರಾಡಿರುವ ಬಸವಾದಿ ಶರಣರಲ್ಲಿ ಹಡಪದ ಅಪ್ಪಣ್ಣನವರು ಪೂಜನೀಯರಾಗಿದ್ದಾರೆ.
ಬಸವ ಕೇಂದ್ರಿತ ವಿರಾಟ ಆಂದೋಲನದಲ್ಲಿ ಅಪ್ಪಣ್ಣನವರ ಕೊಡುಗೆ ಅಪಾರ ಎಂದು ಹಡಪದ ಸಮಾಜದ ಹಿರಿಯ ಮುಖಂಡ ಮಾರುತಿ ಬಾಗೂರ ಹೇಳಿದರು.
ಹಡಪದ ಸಮಾಜದಿಂದ ಪಟ್ಟಣದ ಸೋಮಾಪೂರ ಬಡಾವಣೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜಗಜ್ಯೋತಿ ಬಸವಣ್ಣನವರ ಅನುಯಾಯಿಗಳಾಗಿದ್ದ ಹಡಪದ ಅಪ್ಪಣ್ಣನವರ ಕಾಯಕ ನಿಷ್ಠೆ, ಭಕ್ತಿ, ದಾಸೋಹ ಕಾರ್ಯಕ್ರಮಗಳು ದಾರಿದೀಪಗಳಾಗಿವೆ’ ಎಂದರು.
ಚಂದ್ರಶೇಖರ ಹಡಪದ ಮಾತನಾಡಿದರು. ರುದ್ರಪ್ಪ ಹಡಪದ, ಬಸವರಾಜ ಹಡಪದ, ಶರಣಪ್ಪ ಹಡಪದ, ರವಿ ಹಡಪದ, ಮಂಜುನಾಥ ಹಡಪದ, ಮುದಕಪ್ಪ ಹಡಪದ, ರಾಮಪ್ಪ ಅಮರಗೋಳ, ಸುನೀಲ ಚಿಕ್ಕನರಗುಂದ, ಫಕೀರಪ್ಪ ಹಡಪದ, ಮಲ್ಲಪ್ಪ, ಮಂಜು ಹಡಪದ, ಯಲ್ಲಪ್ಪ ಹಡಪದ, ಮಲ್ಲಿಕಾರ್ಜುನ ಹಡಪದ, ಶಂಕರ ಬೆಳವಟಗಿ, ಸೂನಂದಪ್ಪ ಹಡಪದ, ಮಂಜು ಜಗಾಪೂರ, ಮಂಜುನಾಥ ಹೈತಾಪೂರ, ರಾಮು ಇತರರಿದ್ದರು.